ನೆಹರು ಭಾವಚಿತ್ರ ಬಿಟ್ಟಮಾತ್ರಕ್ಕೆ ಇತಿಹಾಸ ಅಳಿಸಲಾಗದು – ಕಾಂಗ್ರೆಸ್ ಆಕ್ರೋಶ

ಕೊಪ್ಪಳ, ಆ. ೧೫ : ಮೊದಲ ಪ್ರಧಾನಮಂತ್ರಿ ಪಂಡಿತ್ ನೆಹರು ಅವರ ಭಾವಚಿತ್ರ ಬಿಟ್ಟು ಜನರ ದುಡ್ಡಲ್ಲಿ ಸುಳ್ಳು ಹೇಳುವ ಜಾಹೀರಾತು ನೀಡಿರುವದರಿಂದ ಇತಿಹಾಸವನ್ನೇನು ಅಳಿಸಲಾಗದು ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ವತಿಯಿಂದ ಅವರು ನಗರದ ಅಶೋಕ ವೃತ್ತದಲ್ಲಿ ಇರುವ ಅಮೃತ ಮಹೋತ್ಸವ ಫಲಕದ ಮುಂದೆ ಕಪ್ಪು ಪಟ್ಟಿ ಕಟ್ಟಿಕೊಂಡು, ನೆಹರು ಭಾವಚಿತ್ರ ಹಿಡಿದು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ದೇಶದ ಸ್ವಾತಂತ್ರ್ಯ ಸೇನಾನಿ, ಮೊದಲ ಪ್ರಧಾನಮಂತ್ರಿ ಪಂಡಿತ್ ನೆಹರು ಅವರ ಮಾಹಿತಿ ಮತ್ತು ಭಾವಚಿತ್ರ ಕೈಬಿಟ್ಟು, ರಣಹೇಡಿ ಸಾವರ್ಕರ್ ಭಾವಚಿತ್ರವನ್ನು ಅಂಬೇಡ್ಕರ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಗಿಂತ ಎತ್ತರದಲ್ಲಿ ಹಾಕಿ ಮೂವರಿಗೂ ಅವಮಾನ ಮಾಡಿದ್ದನ್ನು ಖಂಡಿಸಿ, ಇತಿಹಾಸ ತಿರುಚವಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್, ಕಾಂಗ್ರೆಸ್ ಎಸ್.ಟಿ. ಘಟಕ ತಾಲ್ಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡ ನಾಗರಾಜ ಚಲವಾದಿ, ಮಾಜಿ ಪಟ್ಟಣ ಪಂಚಾಯತ್ ಸದಸ್ಯರಾದ ಯಶೋಧಾ ಮರಡಿ ಮತ್ತು ಸವಿತಾ ಗೋರಂಟ್ಲಿ, ಸೌಭಾಗ್ಯಲಕ್ಷ್ಮೀ ಗೊರವರ್, ಅಂಬಿಕಾ ನಾಗರಾಳ, ಅನಿತಾ ಅಳ್ಳಣ್ಣವರ್, ಸಲೀಂ ಗೊಂಡಬಾಳ ಇತರರು ಇದ್ದರು.

Please follow and like us: