ಕೊಪ್ಪಳದಲ್ಲಿ ತಿರಂಗಾ ಯಾತ್ರೆ

ಕೊಪ್ಪಳ : ಸ್ವಾತಂತ್ರ್ಯ ದ ಅಮೃತ ಮಹೋತ್ಸವ ನಿಮಿತ್ಯ ಕೊಪ್ಪಳದ ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಕೊಪ್ಪಳದ ಹಮಾಲರ ಕಾಲೋನಿಯ ಶಹೀದ್ ಅಷ್ಪಾಖ್ವ ಉಲ್ಲಾಖಾನ್‌ ವೃತ್ತದಲ್ಲಿ ಹಾಗೂ ಮಧ್ಯಾಹ್ನ ಗಡಿಯಾರ ಕಂಬದಿಂದ ಅಶೋಕ್ ಸರ್ಕಲ್ ಮುಖಾಂತರ ಟಿಪ್ಪು ಸುಲ್ತಾನ್ ಸರ್ಕಲ್ ವರೆಗೆ ತಿರಂಗಾಯಾತ್ರೆ ನಿಮಿತ್ಯ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು. ಕೊಪ್ಪಳದ ಮುಸ್ಲಿಂ ಯುವ ಸಮಿತಿ , , ವೇಲ್‌ಫೇರ್‌ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ , ಶಹೀದ್ ಅಶ್ಫಾಕ್ ಉಲ್ಲಾಖಾನ್ ವೃತ್ತ ಸಮಿತಿ , ಹಮಾಲರ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ನಗರಸಭೆ ಹಿರಿಯ ಸದಸ್ಯ ಅಮ್ಜದ್ ಪಟೇಲ್, ಸದಸ್ಯೆ ಸಬೀಹಾ ಪಟೇಲ್, ಮಾಜಿ ನಗರಸಭಾ ಸದಸ್ಯರಾದ ಮಾನ್ವಿ ಪಾಷಾ, Wpi ಜಿಲ್ಲಾಧ್ಯಕ್ಷ ಅದಿಲ್ ಪಟೇಲ್, ಜಮಾತೆ ಇಸ್ಲಾಂ ಎ ಹಿಂದ್ ಘಟಕ ಅದ್ಯಕ್ಷ ಹಿದಾಯತ್ ಅಲಿ, Wpi ಮಹಿಳಾ ಘಟಕದ ಅಧ್ಯಕ್ಷೆ ಸಲೀಮಾ ಜಹಾ, ಸಲಿಂ ಗೊಂಡಬಾಳ, ಸಲಿಂ ಮಂಡಲಗೇರಿ, ಅಶಫಾಕ್ ಅರಗಂಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Please follow and like us: