೭೫ ವಿಶೇಷತೆಗಳ ಸಂಗ್ರಹ ಯೋಗ್ಯ ಪುಸ್ತಕ -ಗವಿಶ್ರೀಗಳು

ಕೊಪ್ಪಳ : ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ಕನ್ನಡನೆಟ್.ಕಾಂ ಬಹುತ್ವ ಭಾರತ ಹೊರತಂದಿರುವ ಜಿಲ್ಲೆಯ ೭೫ ವಿಶೇಷತೆಗಳ ಈ ಪುಸ್ತಕ ಸಂಗ್ರಹ ಯೋಗ್ಯವಾಗಿರುವಂಥಹದ್ದು. ಜಿಲ್ಲೆಯ ಬಹಳಷ್ಟು ಮಹತ್ವದ ಅಂಶಗಳು, ವಿಶೇಷತೆಗಳನ್ನು ಒಂದೇ ಕಡೆ ನೀಡುವ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.


ಗವಿಮಠದ ಆವರಣದಲ್ಲಿ ಜಿಲ್ಲೆಯ ೭೫ ವಿಶೇಷತೆಗಳ ಕುರಿತು ಕನ್ನಡನೆಟ್.ಕಾಂ ಬಹುತ್ವ ಮೀಡಿಯಾ ಹೌಸ್ ಹೊರತಂದಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶ್ರೀಗಳು ಜಿಲ್ಲೆಯ ವಿಶೇಷತೆಗಳು ಮತ್ತು ಗೊತ್ತಿರದ ಎಷ್ಟೋ ವಿಷಯಗಳನ್ನು ಒಟ್ಟುಗೂಡಿಸಿ ನೀಡುತ್ತಿರುವದು ಒಳ್ಳೆಯದು, ಇತ್ತೀಚಿನದ ದಿನಗಳಲ್ಲಿ ಆನಲೈನ್ ಪತ್ರಿಕೋಧ್ಯಮ ವೇಗವಾಗಿ ಬೆಳೆಯುತ್ತಿದೆ. ಆನಲೈನ್ ಮತ್ತು ಪುಸ್ತಕ ರೂಪದಲ್ಲಿ ಮಾಹಿತಿ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು. ಕಳೆದ ಒಂದು ದಶಕದ ಅವಧಿಯಲ್ಲಿ ೫ ಜಿಲ್ಲಾ ಡೈರೆಕ್ಟರಿಗಳನ್ನು ಪ್ರಕಟಗೊಂಡು ಜನ ಮೆಚ್ಚುಗೆ ಪಡೆದಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ಜಿಲ್ಲೆಯ ೭೫ ವಿಷಯಗಳ ಕುರಿತು ಪುಸ್ತಕ ಹೊರತರಲಾಗಿದೆ. ಈ ಸಂದರ್ಭದಲ್ಲಿ ಪತ್ರಕರ್ತರಾದ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್. ವಿ, ಅಖೀಲ್ ಹುಡೇವು, ಕಲೀಲ್ ಹುಡೇವು, ಮಲ್ಲಪ್ಪ ಪರೋಡಿ,ಆರ್.ಎಚ್.ಅತ್ತನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: