75 ನೇ ಸ್ವಾಂತ್ಯೋತ್ಸವದ ಸಂದರ್ಭದಲ್ಲಿ ಭಗತ್ ಸಿಂಗ್ , ನೇತಾಜಿ ಕನಸಿನ ಶಿಕ್ಷಣ ವ್ಯವಸ್ಥೆ ಕಟ್ಟಲು ವಿದ್ಯಾರ್ಥಿಗಳ ಸಂಕಲ್ಪ ಸಪ್ತಾಹದ (ಆಗಸ್ಟ್ 9 ರಿಂದ ಆಗಸ್ಟ್ 15 ರ ವರೆಗೆ ) ಹಿನ್ನೆಲೆಯಲ್ಲಿ ಎ.ಐ.ಡಿ.ಎಸ್. ಓ ವತಿಯಿಂದ ಕೊಪ್ಪಳದ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಆಗಸ್ಟ್ 11,12 ರಂದು ಸ್ವಾತಂತ್ರ ಸಂಗ್ರಾಮದ ಧೀರ ಹುತಾತ್ಮ ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ ಹುತಾತ್ಮ ದಿನದಂದು ಅವರನ್ನು ಸ್ಮರಣೆ ಗೈದರು. ಈ ಸಂದರ್ಭದಲ್ಲಿ
ಮಾತನಾಡಿದ ಎ.ಐ.ಡಿ.ಎಸ್. ಓ ರಾಜ್ಯ ನಾಯಕರಾದ ಗುರಳ್ಳಿ ರಾಜ ಅವರು ಖುದಿರಾಮ್ ಬೋಸ್, ಭಗತ್ ಸಿಂಗ್, ನೇತಾಜಿ ಯಂತಹ ಮಹಾನ್ ಕ್ರಾಂತಿಕಾರಿಗಳು ಕಂಡ ಸಮಾಜವಾದಿ ಭಾರತ ಕಟ್ಟಲು, ಅವರ ಕನಸಿನ ಪ್ರಜಾ ತಾಂತ್ರಿಕ, ಧರ್ಮ ನಿರಪೇಕ್ಷ, ವೈಜ್ಞಾನಿಕ ಶಿಕ್ಷಣ ವ್ಯವಸ್ಥೆ ಕಟ್ಟಲು ಸಂಕಲ್ಪ ತೊಡಬೇಕು. ಅವರ ವಿಚಾರಗಳು ನಮಗೆ ಆದರ್ಶ ವಾಗಬೇಕು ಎಂದರು.
ಈ ದೇಶದ ವಿದ್ಯಾರ್ಥಿಗಳಾದ ನಾವು , ಹಿಂದಿನ ಎಲ್ಲಾ ಮಹಾನ್ ವ್ಯಕ್ತಿಗಳನ್ನು ಸ್ಫೂರ್ತಿಯಿಂದ ಸ್ಮರಿಸುತ್ತೇವೆ . ವಿದ್ಯಾಸಾಗರರು ಎತ್ತಿಹಿಡಿದ ವೈಜ್ಞಾನಿಕ ಮನೋಧರ್ಮದೊಂದಿಗೆ , ಕೆಚ್ಚೆದೆಯ ಖುದೀರಾಂನ ಮನದಲ್ಲಿ ನೆನೆಯುತ್ತ , ನೊಂದವರಿಗೆ ಮಿಡಿಯುವ ಶರತ್ ಚಂದ್ರರ ಸಾಹಿತ್ಯದ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತ , ತುಳಿತಕ್ಕೆ ಒಳಗಾದವರ ಬಗೆಗಿನ ಉದಾತ್ತ ಭಾವನೆಯನ್ನೇ ದೇಶಪ್ರೇಮ ಎಂದು ಬಣ್ಣಿಸಿದ ವಿವೇಕಾನಂದರನ್ನು ನೆನೆಯುತ್ತಾ , ನೇತಾಜಿಯವರ ಧರ್ಮನಿರಪೇಕ್ಷತೆಯೊಂದಿಗೆ , ಹುತಾತ್ಮಭಗತ್ ಸಿಂಗ್ ಮತ್ತು ಮುಂತಾದ ಕ್ರಾಂತಿಕಾರಿಗಳು ಕನಸುಕಂಡ ‘ ಯಾವ ಕಂದನೂ ಹಸಿವೆಯಿಂದ ನರಳದ , ಯಾವ ಹೆಣ್ಣು ಕೂಡ ಅಭದ್ರತೆಯಿಂದ ರೋಧಿಸದ , ಎಲ್ಲರಿಗೂ ಶಿಕ್ಷಣ – ಉದ್ಯೋಗ – ಆರೋಗ್ಯವನ್ನು ಒದಗಿಸಿ , ಸಂತಸದ ಬದುಕನ್ನು ನನಸಾಗಿಸುವ , ಮಾನವ ಜನಾಂಗವು ಹೆಮ್ಮೆಯಿಂದ ತಲೆಯೆತ್ತಿ ಮುನ್ನಡೆಯುವ ಸಮಾಜವಾದಿ ಭಾರತ’ವನ್ನು ನಿರ್ಮಿಸುವ ಸಂಕಲ್ಪ ತೊಡುತ್ತೇವೆ . ಈ ಮೂಲಕ , ಸ್ವಾತಂತ್ರ್ಯ ಸಂಗ್ರಾಮದ ಎಲ್ಲ ಹುತಾತ್ಮರಿಗೆ ನಮ್ಮಗೌರವ ಸಲ್ಲಿಸುವುದಾಗಿ ಪ್ರತಿಜ್ಞೆ ತೆಗದುಕೊಳ್ಳಬೇಕು ಎಂದರು ನಂತರ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞೆ ತೆಗದುಕೊಂಡರು.. ಈ ಸಂಧರ್ಭದಲ್ಲಿ ಎ.ಐ.ಡಿ.ಎಸ್.ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಸದಸ್ಯರಾದ ಮಾರುತಿ, ಪ್ರಜ್ವಲ್, ಕಿರಣ್ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು…
Please follow and like us: