ಸ್ವಾತಂತ್ರ್ಯ ಯೋಧ ಕೊಪ್ಪಳದ ನಾರಾಯಣಚಾರ್ ಮಾದಿನೂರರಿಗೆ ಜಿಲ್ಲಾಡಳಿತದಿಂದ ಸನ್ಮಾನ

ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ : ಸ್ವಾತಂತ್ರ್ಯ ಯೋಧರ ಮನೆಗೆ ಭೇಟಿ


ಕೊಪ್ಪಳ, : ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ನಿಮಿತ್ತ ಜಿಲ್ಲಾಡಳಿತದ ವತಿಯಿಂದ ಕೊಪ್ಪಳದ 97 ವರ್ಷ ವಯಸ್ಸಿನ ಸ್ವಾತಂತ್ರ್ಯ ಯೋಧರಾದ ನಾರಾಯಣಚಾರ್ ಮಾದಿನೂರು ರವರಿಗೆ ಅವರ ನಿವಾಸದಲ್ಲಿ ಇಂದು (ಆ.09) ಸನ್ಮಾನಿಸಲಾಯಿತು.
ಸ್ವಾತಂತ್ರ್ಯ ಯೋಧರಿಗೆ ಅವರ ಮನೆಯಲ್ಲಿಯೇ ಸನ್ಮಾನ ಮಾಡಬೇಕೆಂಬ ಸರ್ಕಾರದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದಿಂದ ಮಂಗಳವಾರದಂದು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಅಪಾರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಕೊಪ್ಪಳದ ಸ್ವಾತಂತ್ರ್ಯ ಯೋಧರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಹಶೀಲ್ದಾರ್ ವಿಠಲ್ ಚೌಗಲಾ, ನಾರಾಯಣಚಾರ್ ಮಾದಿನೂರು ರವರ ಕುಟುಂಬ ಸದಸ್ಯ ಪ್ರಾಣೇಶ್ ಮಾದಿನೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ 08 ಜನ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ;

ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಅಂಗವಾಗಿ ಕೊಪ್ಪಳದ ನಾರಾಯಣಚಾರ್ ಮಾದಿನೂರು ಹಾಗೂ ತಳಕಲ್‌ನ ಜಿ.ಬಿ. ಮೂಲಿಮನಿ ಸೇರಿ ಜಿಲ್ಲೆಯಲ್ಲಿ 08 ಜನ ಸ್ವಾತಂತ್ರ್ಯ ಹೋರಾಟಗಾರರಿದ್ದು, ಎಲ್ಲರಿಗೂ ಆಯಾ ತಾಲ್ಲೂಕುಗಳ ತಹಶೀಲ್ದಾರರು ಸನ್ಮಾನಿಸಿದ್ದಾರೆ.

Please follow and like us: