ಕ್ಯಾಮರಾಮೆನ್ ಸೆಲ್ವರಾಜ್ ಮನೆಗೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಭೇಟಿ

ಚಾಮರಾಜನಗರ ನಗರ ಜಿಲ್ಲೆಯ ಮಾಂಬಳ್ಳಿ ಗ್ರಾಮದಲ್ಲಿ ಸೆಲ್ವರಾಜ್ (ಫಸ್ಟ್ ನ್ಯೂಸ್ ಕ್ಯಾಮರಾಮೆನ್) ಅವರ ಮನೆಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೆ, ಕೋವಿಡ್ ಕಥೆಗಳು ಪುಸ್ತಕವನ್ನು ನೀಡಿದರು.
ಮಗನನ್ನು ಕಳೆದುಕೊಂಡು
ತೀವ್ರ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸರ್ಕಾರದಿಂದ
5 ಲಕ್ಷ ರೂ ಪರಿಹಾರ ಕೊಡಿಸಿರುವುದನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸಿ ಕಣ್ಣೀರಾದರು. ಈ ಹಣದಲ್ಲಿ ಸೆಲ್ವರಾಜ್ ಹೆಸರಿನಲ್ಲಿ ವಾಸಕ್ಕೊಂದು ಮನೆ ಮಾಡಿಕೊಳ್ಳುತ್ತಿರುವುದಾಗಿ (ಆ ಮನೆಯ ಮುಂದೆ ತೆಗೆದ ಚಿತ್ರ) ತಾಯಿ ರಾಜಮ್ಮ ತಿಳಿಸಿದರು.
ಈ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಹಾಜರಿದ್ದರು.

Please follow and like us: