ಕೊಪ್ಪಳ ಜಿಲ್ಲಾ ವಕೀಲರ ಸಂಘದಿಂದ CM ಬೊಮ್ಮಾಯಿಗೆ ಮನವಿ

Breaking NEWs ನಿನ್ನೆ ದಿನಾಂಕ 01.08.2022 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಕೊಪ್ಪಳಕ್ಕೆ ಆಗಮಿಸಿದಾಗ ಕೊಪ್ಪಳ ಜಿಲ್ಲಾ ವಕೀಲರ ಸಂಘದಿಂದ ಎರಡು ಮನವಿಪತ್ರ ಸಲ್ಲಿಸಲಾಯಿತು..
1.ಜನನ ಮರಣ ನೋಂದಣಿ ಕಾಯ್ದೆ 1969ರ ಹೊಸ ತಿದ್ದುಪಡಿ ಯನ್ನು ಹಿಂಪಡೆಯುವ ಕುರಿತು..
2.ಕೊಪ್ಪಳ ಜಿಲ್ಲೆಯ ಕೊಪ್ಪಳ ನಗರ ವ್ಯಾಪ್ತಿಯ ಜಮೀನುಗಳನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಟ್ಟಡ ನಿರ್ಮಾಣದ ಸಲುವಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದು ಸದರಿ ಜಮೀನಿಗೆ ಪರಿಹಾರ ಮತ್ತು ನೂತನ ನ್ಯಾಯಾಲಯದ ಕಟ್ಟಡಕ್ಕಾಗಿ ಹಣ ಬಿಡುಗಡೆ ಮಾಡುವ ಕುರಿತು ಮನವಿ ಸಲ್ಲಿಸಲಾಯಿತು..
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ ಪಾಟೀಲ್ ರು ಕೂಡ ಶೀಘ್ರವಾಗಿ ಹಣ ಬಿಡುಗಡೆ ಗೊಳಿಸುವ ಭರವಸೆ ನೀಡಿದರು..

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಿರಿಯ ವಕೀಲರು ಉಪಸ್ಥಿತರಿದ್ದರು

Please follow and like us: