ಬೈಪಾಸ್ ನಲ್ಲಿ ಲಾರಿ ನಿಲ್ಲಿಸಿ ಲೂಟಿ ಮಾಡುತ್ತಿದ್ದವರ ಬಂಧನ

ಗಂಗಾವತಿ : ಬೈಪಾಸ್ ನಲ್ಲಿ ಲಾರಿ ನಿಲ್ಲಿಸಿ ಲೂಟಿ ಮಾಡುತ್ತಿದ್ದವರ ಬಂಧಿಸಲಾಗಿದೆ.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗಮರ ಕಲ್ಲುಡಿ ಮತ್ತು ಹೊಸಳ್ಳಿ ಬೈಪಾಸ್ ರಸ್ತೆಯಲ್ಲಿ ಜಂಗಮರ ಕಲ್ಲುಡಿಯ ರೈಲ್ವೆ ಬ್ರಿಡ್ಜ್ ಹತ್ತಿರ ದಿ -17-07-2022 ರಂದು ರಾತ್ರಿ 01:00 ಗಂಟೆಯ ಸುಮಾರಿಗೆ ನಾಲ್ಕು ಜನ ದುಷ್ಕರ್ಮಿಗಳು ರಸ್ತೆಯಲ್ಲಿ ಹೊರಟಿದ್ದ ಲಾರಿಯ ಗ್ಲಾಸುಗಳಿಗೆ ಕಲ್ಲುಗಳಿಂದ ಒಡೆದು ಲಾರಿಯನ್ನು ನಿಲ್ಲಿಸಿ ಚಾಲಕನಾದ ಈರಣ್ಣ ಎಂಬುವನಿಗೆ ಲಾಂಗುಗಳಿಂದ ಹೆದರಿಸಿ ಆತನ ಹತ್ತಿರ ಇದ್ದ ನಗದು ಹಣ 10,320-00 ರೂ.ಗಳನ್ನು ಒಂದು ವಿವೋ ವೈ .20 20 ಜಿ ಮೋಬೈಲ್ ಕಸಿದುಕೊಂಡು ಹೋಗಿದ್ದರು . ಈ ಬಗ್ಗೆ ಚಾಲಕ ಈರಣ್ಣನು ನೀಡಿದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲಾಗಿತ್ತು. . ಅಲ್ಲದೇ ದಿನಾಂಕ : 26-02-2022 ರಂದು ದಾಸನಾಳ ಬ್ರಿಡ್ಡ ಹತ್ತಿರ ನಿಲ್ಲಿಸಿದ ಒಂದು ಲಾರಿಯಲ್ಲಿ ಚಾಲಕ ನಾಗರಾಜ ರಾಯಚೂರು ಈತನ ಜೇಬಿನಿಂದ ನಗದು ಹಣ ರೂ . 18,500 00 ಮತ್ತು ಒಂದು ಎಂ.ಐ. ಮೊಬೈಲ್ ನ್ನು ಕಳವು ಮಾಡಿದ್ದರು. ಈ ಬಗ್ಗೆ ಚಾಲಕನು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಾಗಿತ್ತು. ಪ್ರಕರಣಗಳ ಪತ್ತೆ ಕುರಿತು ಅರುಣಾಂಗು ಗಿರಿ , ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ , ಆರ್.ಎಸ್ . ಉಜ್ಜನಕೊಪ್ಪ , ಪೊಲೀಸ್ ಉಪಾಧೀಕ್ಷಕರು , ಗಂಗಾವತಿ ಇವರ ಮಾರ್ಗದರ್ಶನದಲ್ಲಿ ಮಂಜುನಾಥ ಪೊಲೀಸ್ ಇನ್ಸಪೆಕ್ಟರ್ ಮತ್ತು ಶ್ರೀಮತಿ ಶಾರವ್ವ , ಮ.ಪಿ.ಎಸ್.ಐ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಶೇಖರ ನಾಯ್ಕ ಎ.ಎಸ್.ಐ. ಮರಿಯಪ್ಪ ಹೆಚ್.ಸಿ. 41 , ಮುತ್ತುರಾಜ ಪಿ.ಸಿ. 155 , ವಂಕರಡ್ಡಿ ಹೆಚ್.ಸಿ. 173 , ಸೈಯ್ಯದ್ ಗೌಸ್ ಪಿ.ಸಿ. 153 , ಶಿವಕುಮಾರ ಪಿ.ಸಿ. 589 , ಮಾಂತೇಶ ಪಿ.ಸಿ. 343 , ರಾಘವೇಂದ್ರ ಪಿ.ಸಿ. 349 , ಮಂಜುನಾಥ ಪಿ.ಸಿ. 588 ಇವರನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. , ಈ ತಂಡವು ದಿನಾಂಕ : – 29-07-2022 ರಂದು ಬೆಳಗಿನಜಾವ ಮರಳಿ ಟೋಲ್ ಹತ್ತಿರ ಈ ಪ್ರಕರಣಗಳಲ್ಲಿ ಕೃತ್ಯವನ್ನು ಎಸಗಿದಂತಹ ನಾಲ್ಕು ಜನ ಆರೋಪಿತರಾದ 1 ] ಕೊಟ್ರಯ್ಯ ತಂದೆ ಮಲ್ಲಯ್ಯ ಹೀರೆಮಠ , 2 ) ಬಸವರಾಜ ತಂದ ಲಿಂಗಪ್ಪ 3 ] ಕೃಷ್ಣಾ ಮಧುಸೂದನ್ ಇವರನ್ನು ಬಂಧಿಸಿ ಅವರಿಂದ ಒಂದು ವಿವೋ ಮೊಬೈಲ್ , ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಅಟೋರಿಕ್ಷಾ ಮತ್ತು 2 ಲಾಂಗುಗಳನ್ನು ವಶಪಡಿಸಿಕೊಂಡಿದ್ದಾರೆ.

Please follow and like us: