೩೧ರಂದು ಶಾಂತಾದೇವಿ ಹಿರೇಮಠರ ‘ಸಮರಸ’ ಕವನಸಂಕಲನ ಬಿಡುಗಡೆ


ಕೊಪ್ಪಳ : ಜಿಲ್ಲೆಯ ಹಿರಿಯ ಕವಯತ್ರಿ ದಿ. ಶಾಂತಾದೇವಿ ಹಿರೇಮಠರ ಕೊನೆಯ ಕೃತಿ ‘ಸಮರಸ’ ಕವನ ಸಂಕಲನ ಇದೇ ದಿ. ೩೧ರಂದು ಕೊಪ್ಪಳದ ತಾಲೂಕ ಪಂಚಾಂiiತ್ ಸಭಾಭವನದಲ್ಲಿ ನಡೆಯಲಿದೆ. ದಿ.ಶಾಂತಾದೇವಿ ಹಿರೇಮಠ,ದಿ.ಗುರುಲಿಂಗಯ್ಯ ಹಿರೇಮಠರ ಕೊನೆಯ ಕೃತಿ ಇದಾಗಿದೆ. ಹಿರಿಯ ಸಾಹಿತಿಗಳಾದ ಎ.ಎಂ.ಮದರಿಯವರು ಕವನ ಸಂಕಲನ ಬಿಡುಗಡೆ ಗೊಳಿಸಲಿದ್ದಾರೆ. ಕವನಸಂಕಲನ ಕುರಿತು ಮೊಳಕಾಲ್ಮೂರಿನ ಕವಿ ಜಬೀವುಲ್ಲ ಎಂ.ಅಸದ್ ಮಾತನಾಡಲಿದ್ದಾರೆ. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್.ಪಾಟೀಲ್ ವಹಿಸಿಕೊಳ್ಳಲಿದ್ದಾರೆ. ಆಸಕ್ತರು ಕಾರ್‍ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಆಲೋಚನಾ ಪ್ರಕಾಶನ ಹಾಗೂ ಕೊಪ್ಪಳ ಸಾಹಿತ್ಯ ಬಳಗ ಕೋರಿದೆ.

Please follow and like us: