ಜನನ ಮರಣ ನೊಂದಣಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ವಕೀಲರ ಆಗ್ರಹ

ಕೊಪ್ಪಳ : ಜನನ ಮರಣ ನೊಂದಣಿ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಕೊಪ್ಪಳ ಬಾರ್ ಅಸೋಶಿಯೇಷನ್ ಕುಷ್ಟಗಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ ವಕೀಲರು ಕರ್ನಾಟಕ ಸರ್ಕಾರವು ದಿನಾಂಕ 11-07-2022 ರಂದು ಜನನ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿ , ಹೊಸ ಕಾಯ್ದೆಯ ಪ್ರಕಾರ ಜನನ ಮತ್ತು ಮರಣ ಗೊಂದಣಿಗೆ ಸಂಬಂಧಿಸಿದ್ದಂತೆ ಅರ್ಜಿಯನ್ನು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಸಲ್ಲಿಸಬೇಕೆಂದು ತಿದ್ದುಪಡಿ ಮಾಡಿದ್ದು ಇರುತ್ತದೆ . ಸದರಿ ಕಾಯ್ದೆಯ ತಿದ್ದುಪಡಿಯು ಜನ ಸಾಮಾನ್ಯನಿಗೆ ತೊಂದರೆಯನ್ನುಂಟು ಮಾಡುವದರ ಜೊತೆಗೆ ವಿಳಂಬ ಮತ್ತು ದುಬಾರಿ ನ್ಯಾಯವಾಗಿ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಈಡುಮಾಡಿದಂತಾಗುತ್ತದೆ ಸದರಿ ಕಾಯ್ದೆಯ ಹೊಸ ತಿದ್ದುಪಡಿಯನ್ನು ರದ್ದುಗೊಳಿಸಿ , ಈ ಮೊದಲು ಇದ್ದ ಹಾಗೆ ಮಾತ್ರ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣಾ ಅಧಿಕಾರ ವ್ಯಾಪ್ತಿಗೆ ಒಳಪಡಿಸಬೇಕೆಂದು ಹಾಗೂ ಜನನ ಮತ್ತು ಮರಣ ಕಾಯ್ದೆಯ ಹೊಸ ತಿದ್ದುಪಡಿ ನಿಯಮ 2012 ನ್ನು ನ್ಯಾಯಕ ಹಿತ ದೃಷ್ಠಿಯಿಂದ ರದ್ದುಗೊಳಿಸಿ ಆದೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಜನನ ಮತ್ತು ಮರಣ ಕಾಯ್ದೆಯ ಹೊಸ ತಿದ್ದುಪಡಿ 2022 ನ್ನು ಜನಸಾಮಾನ್ಯರಿಗೆ ಹಾಗೂ ವಕೀಲರ ಹಿತರಕ್ಷಣೆಗಾಗಿ ಶೀಘ್ರವಾಗಿ ಜನನ ಮತ್ತು ಮರಣ ಕಾಯ್ದೆಯ ಹೊಸ ತಿದ್ದುಪಡಿ ನಿಯಮ 2022 ನ್ನು ನ್ಯಾಯಕ ಹಿತ ದೃಷ್ಟಿಯಿಂದ ರದ್ದುಗೊಳಿಸಿ ಆದೇಶ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಾರ್ ಅಸೋಶಿಯೇಷನ್ ಅಧ್ಯಕ್ಷರಾದ ಎ.ವಿಕಣವಿ, ಕಾರ್ಯದರ್ಶಿ ಬಸವರಾಜ್ ಸಜ್ಜನ್ ,ದಿವಾಕರ ಬಾಗಲಕೋಟೆ, ಎಲ್ .ಹೆಚ್. ಹಿರೇಗೌಡರ, ಸಿಎಂ,ಪೋಲಿಸ್ ಪಾಟೀಲ್ ಭೂಸನೂರಮಠ,ಪ್ರಕಾಶ ಪರ್ವತಗೌಡರ ಸೇರಿದಂತೆ  ಹಲವಾರು ವಕೀಲರು ಭಾಗಹಿಸಿದ್ದರು.

Please follow and like us: