ಮುದ್ರಣ,ದೃಶ್ಯ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣವು ಬಲಿಷ್ಠವಾಗಿದೆ-ಡಾ. ಬಂಡು ಕುಲಕರ್ಣಿ

ಕುಷ್ಟಗಿ: ಸರಕಾರದ ಮೂರು ಅಂಗಗಳಿಗೆ ಚೌಕಟ್ಟನ್ನು ಹೊಂದಿವೆ ಆದರೆ ಪತ್ರಿಕಾ ರಂಗವು ಸ್ವತಂತ್ರವಾಗಿ ಹೊರಗಡೆಯಿಂದ ನಿಂತು ಮೂರು ಅಂಗಗಳನ್ನು ಸರಿದಾರಿಗೆ ತರುವಂತಹ ಹಾಗೂ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸುವ ಮೂಲಕ ಸಮಾಜಪರವಾದ ಕಾರ್ಯಗಳನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಗೋಳ ಅಭಿಪ್ರಾಯಪಟ್ಟರು.


ಕುಷ್ಟಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಈ ಸರಕಾರದ ಮೂರು ಅಂಗಗಳಲ್ಲಿ ಉಂಟಾಗುವ ಲೋಪದೋಷಗಳನ್ನು ಹುಡುಕಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಸರಿಪಡಿಸವಂತಹ ಮಹತ್ತರ ಕಾರ್ಯವನ್ನು ಮಾಡುತ್ತಿರುವದು ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ತಹಸೀಲ್ದಾರ ಗುರುರಾಜ ಛಲವಾದಿ ಮಾತನಾಡಿ ಭಯೋತ್ಪಾದಕರ ಅಥವಾ ಉಗ್ರರ ಬಂದುಕಿನಿAದ ಬರುವ ಗುಂಡುಗಳಿಗಿAತ ಪತ್ರಕರ್ತರಿಂದ ಪ್ರಕವಾಗುವ ಲೇಖನಗಳು ತುಂಬಾ ಹರಿತವಾದದ್ದು ಪತ್ರಕರ್ತರ ಲೇಖನಗಳು ಸಮಾಜದಲ್ಲಿ ಬದಲಾವಣೆಯನ್ನು ತರುವಂತಹ ಶಕ್ತಿಯನ್ನು ಹೊಂದಿವೆ 15ನೇ ಶತಮಾನದಲ್ಲಿ ಒಂದು ಧಾರ್ಮಿಕ ಸಂಘಟನೆಯ ಪ್ರಚಾರಕ್ಕಾಗಿ ಹುಟ್ಟಿಕೊಂಡ ಮಂಗಳೂರು ಸಮಾಚಾರ ಎಂಬ ಪತ್ರಿಕೆಯು ಹಾಗೂ ನಂತರದಲ್ಲಿ ಹುಟ್ಟಿಕೊಂಡ ಪತ್ರಿಕೆಗಳು ಹಲವಾರು ಸ್ವತಂತ್ರ ಸಂಗ್ರಾಮ, ಹೋರಾಟ, ಚಳುವಳಿಯ ಕಾಲದಲ್ಲಿ ಆಗಿರುವ ಬದಲಾವಣೆಗಳನ್ನು ಸಾರ್ವಜನಿಕರಿಗೆ ವಿಷಯಗಳನ್ನು ಮುಟ್ಟಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾದದು ಎಂದರು. ಪ್ರಸ್ತುತ ದಿನಮಾನಗಳಲ್ಲಿಯೂ ಸಹ ಪತ್ರಿಕೆಯು ತಮ್ಮ ಪಾತ್ರವನ್ನು ಕಳೆದುಕೊಂಡಿಲ್ಲ ಪತ್ರಕರ್ತರಾದವರು ಎಲ್ಲಾ ವಿಷಯಗಳನ್ನು ರಾಜಕೀಯ, ಧಾರ್ಮಿಕ, ಕ್ರೀಡೆ ಸೇರಿದಂತೆ ವಿವಿಧ ವಿಷಯಗಳನ್ನು ಜನರಿಗೆ ತಲುಪಿಸುವ ಸುಲವಾಗಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದರು.

ವಿಶೇಷ ಉಪನ್ಯಾಸವನ್ನು ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಡಾ. ಬಂಡು ಕುಲಕರ್ಣಿ ಅವರು ಮಾತನಾಡಿ ಗ್ರಾಮೀಣ ಭಾಗದ ಮಹತ್ವದ ಕೆಲ ಸುದ್ದಿಗಳು ರಾಜಧಾನಿ ತಲುಪಿತ್ತಿಲ್ಲ ಸದ್ಯ ಜನರು ತಂತ್ರಜ್ಞಾನಕ್ಕೆ ಮಾರುಹೋಗಿದ್ದು ರಾಜ್ಯದ ಅಂದಾಜು 72 ಕೋಟಿ ಜನರು ಸಾಮಾಜಿಕ ಜಾಲತಾಣವನ್ನು ಅವಲಂಬಿತರಾಗಿದ್ದಾರೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣವು ಬಲಿಷ್ಠವಾಗಿದೆ ಇಂದಿನ ದಿನಮಾನಗಳಲ್ಲಿ ಪತ್ರಿಕೆಗಳ ಕಾಯ್ದು ಓದುಗರರು ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು ಹಾಗೂ ಪತ್ರಿಕೆಯು ನೈಜ ಸುದ್ದಿಗಳನ್ನು ನೀಡುವಲ್ಲಿ ಬಹುಮುಖ್ಯ ಪಾತ್ರವಾಗಿದೆ ಎಂದರು.
ಮಾಜಿ ಶಾಸಕ ಹಸನಸಾಬ ದೋಟಿಹಾಳ ಮಾತನಾಡಿ ಪತ್ರಕರ್ತರಾದವರು ಯಾವುದೇ ಆಮಿಷಕ್ಕೆ ಒಳಗಾಗದೆ ಯಾರಮುಲಾಜಿಲ್ಲದೆ ಸುದ್ದಿಯನ್ನು ಮಾಡಬೇಕು ಮಾಧ್ಯಮದ ಮೂಲಕ ಸಮಾಜ ತಿದ್ದುವ ಕಾರ್ಯ ಅಮೂಲ್ಯವಾಗಿದೆ ಹಾಗೂ ಪತ್ರಿಕಾ ರಂಗಕ್ಕೆ ಮಹಿಳೆಯರು ಬರಬೇಕು ಅಂದಾಗ ಮಹಿಳಾ ಸಮಸ್ಯೆಗಳು ಹೊರ ಬರುತ್ತವೆ ಎಂದು ಹಸನಸಾಬ ದೋಟಿಹಾಳ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಶರಣಪ್ಪ, ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು, ಹನಮಸಾಗರ ಪಿ.ಎಸ್.ಐ ಅಶೋಕ ಬೇವೂರು, ಜೆಡಿಎಸ್ ರಾಜ್ಯಜಂಟಿ ಕಾರ್ಯದರ್ಶಿ ಸಿ.ಎಂ.ಹಿರೇಮಠ, ಹೆಚ್.ಎಸ್.ಹರೀಶ,ಸಾಧಿಕ ಅಲಿ, ಹನುಮಂತ ಹಳ್ಳಿಕೇರಿ, ವೈ.ನಾಗರಾಜ, ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಪ್ರಾಚಾರ್ಯ ಡಾ.ಎಸ್.ವಿ.ಡಾಣಿ, ಮುಖೇಶ ನಿಲೋಗಲ್, ಸುರೇಶ ಕುಂಟನಗೌಡರ, ಸಂಗಮೇಶ ಸಿಂಗಾಡಿ, ರವೀಂದ್ರ ಬಾಕಳೆ, ಬಸವರಾಜ ಪಲ್ಲೇದ, ಶ್ರೀನಿವಾಸ ಜಾಗೀರದಾರ, ಸಂಘದ ತಾಲೂಕಾ ಅಧ್ಯಕ್ಷ ಅನೀಲ ಆಲಮೇಲ ಅಧ್ಯಕ್ಷತೆವಹಿಸಿದ್ದರು. ಹಿರಿಯ ಪತ್ರಕರ್ತ ರಾಮಣ್ಣ ಬಂಡಿಹಾಳ ಪ್ರಸ್ತಾವಿಕ ಮಾತನಾಡಿದರು. ಹಾಸ್ಯ ಕಲಾವಿದ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.

Please follow and like us: