ಜಲಶಕ್ತಿ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗಲಿ : ಮೈಥಿಲಿ ಆರ್.

ಜಿಲ್ಲಾ ಜಲಶಕ್ತಿ ಮಾಹಿತಿ ಕೇಂದ್ರ ಉದ್ಘಾಟನೆ

ಕೊಪ್ಪಳ,

ಜಲಶಕ್ತಿ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗಲಿ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಉಪ-ಕಾರ್ಯದರ್ಶಿಗಳು ಹಾಗೂ ಜಲಶಕ್ತಿ ತಂಡದ ಮುಖ್ಯಸ್ಥರಾದ ಮೈಥಿಲಿ ಆರ್. ಅವರು ಹೇಳಿದರು.
ನಗರದ ತಾಲೂಕು ಪಂಚಾಯಿತಿಯ ಸಾಮಾರ್ಥ್ಯಸೌಧದ ಕೊಠಡಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಸಾರ್ವಜನಿಕರ ಮಾಹಿತಿಗಾಗಿ ಪ್ರಾರಂಭಿಸಲಾದ “ಜಿಲ್ಲಾ ಜಲಶಕ್ತಿ ಮಾಹಿತಿ ಕೇಂದ್ರ’’ವನ್ನು ಬುಧವಾರ (ಜು.27) ಉದ್ಘಾಟಿಸಿ, ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಂದ ಅನುಷ್ಠಾನಗೊಂಡ ಜಲಶಕ್ತಿ ಕಾಮಗಾರಿಗಳನ್ನು ಒಂದೆಡೆ ಸಾರ್ವಜನಿಕರಿಗೆ ಪ್ರದರ್ಶಿಸುವುದರಿಂದ ಎಲ್ಲಾ ಕಾಮಗಾರಿಗಳ ಮಾಹಿತಿ ಸಿಗಲಿದೆ. ಒಳ್ಳೆಯ ಆಲೋಚನೆಯಿಂದ ಈ ಮಾಹಿತಿ ಕೇಂದ್ರವನ್ನು ಮಾಡಿದ್ದೀರಿ. ಸಾರ್ವಜನಿಕರಿಗೆ ಇದರ ಸದುಪಯೋಗವಾಗಲಿ. ಜೊತೆಗೆ ಜಲಶಕ್ತಿ ಕಾಮಗಾರಿಗಳು ಮತ್ತಷ್ಟು ಜಿಲ್ಲೆಯ ಸಮರ್ಪಕವಾಗಿ ಅನುಷ್ಠಾನವಾಗಲಿ ಎಂದರು.
ನAತರ ಕೇಂದ್ರದ ಹಿರಿಯ ಜಲ ವಿಜ್ಞಾನಿ ಜಯಪ್ರಕಾಶ್ ಅವರು ಮಾತನಾಡಿ, ವಿವಿಧ ಜಲಶಕ್ತಿ ಕಾಮಗಾರಿಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಈ ಜಲಶಕ್ತಿ ಮಾಹಿತಿ ಕೇಂದ್ರದ ಉದ್ದೇಶಗಳ ಕುರಿತು ಪ್ರಶಂಸಿದರು.
ಪ್ರಗತಿ ಪರಿಶೀಲನೆ ;
ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಜಲಶಕ್ತಿ ಕಾಮಗಾರಿಗಳನ್ನು ವೀಕ್ಷಿಸಲು ಹಾಗೂ ಅಧ್ಯಯನ ನೆಡೆಸಿ ಸಲಹೆ & ಮಾರ್ಗದರ್ಶನ ನೀಡಲು ಕೇಂದ್ರದಿAದ ಆಗಮಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಉಪ-ಕಾರ್ಯದರ್ಶಿಗಳು ಹಾಗೂ ಜಲಶಕ್ತಿ ತಂಡದ ಮುಖ್ಯಸ್ಥರಾದ ಮೈಥಿಲಿ ಆರ್. ಅವರು ಕೃಷಿ, ಸಣ್ಣ ನೀರಾವರಿ, ತೋಟಗಾರಿಕೆ, ಅರಣ್ಯ, ನರೇಗಾ, ಇನ್ನಿತರ ಇಲಾಖೆಗಳಲ್ಲಿ ಅನುಷ್ಠಾನಗೊಂಡ ಕೆರೆಗಳ ಅಭಿವೃದ್ಧಿ, ಗೊಕಟ್ಟೆ, ಮಳೆ ನೀರಿನ ಕೊಯ್ಲು, ರಸ್ತೆ ಬದಿ ಅರಣ್ಯಿಕರಣ, ಮಣು ್ಣ& ನೀರು ಸಂರಕ್ಷಣಾ, ಬದು ನಿರ್ಮಾಣ, ಅಮೃತ ಸರೋವರಗಳಂತಹ ಜಲಶಕ್ತಿ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನೆಡೆಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುAದರೇಶ ಬಾಬು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರುನ್ನುಮ್, ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ, ಗಂಗಾವತಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ, ಉಪನಿರ್ದೇಶಕ ಸಹದೇವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಹಿರಿಯ ವಿಜ್ಞಾನಿ ಅರುಣ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರಂಗಯ್ಯ ಬಡಿಗೇರ, ಸೇರಿದಂತೆ ವಿವಿಧ ಯೋಜನೆಗಳ ಸಂಯೋಜಕರು ಹಾಜರಿದ್ದರು.
ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಜಲಶಕ್ತಿ ಕಾಮಗಾರಿಗಳನ್ನು ವೀಕ್ಷಿಸಲು ಹಾಗೂ ಅಧ್ಯಯನ ನೆಡೆಸಿ ಸಲಹೆ & ಮಾರ್ಗದರ್ಶನ ನೀಡಲು ಕೇಂದ್ರದಿAದ ಆಗಮಿಸಿದ ತಂಡವು 3 ದಿನಗಳ ಕಾಲ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಜಲಶಕ್ತಿ ಕಾಮಗಾರಿಗಳನ್ನು ವೀಕ್ಷಿಸಲು ಸಂಚರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Please follow and like us: