ಕಂದಕೂರರ ‘ನೀರನರಸುತ್ತ…’ ಚಿತ್ರಕ್ಕೆ DIPA ಚಿನ್ನದ ಪದಕ

ಬಲ್ಗೇರಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ


ಕೊಪ್ಪಳ: ಬಲ್ಗೇರಿಯಾದಲ್ಲಿ ನಡೆದ 7ನೇ ಡ್ಯಾನ್ಯೂಬ್ ಡಿಜಿಟಲ್ ಸರ್ಕ್ಯೂಟ್ -2022 ರಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ನೀರನರಸುತ್ತ…’ (In Search Of Water) ಶೀರ್ಷಿಕೆಯ ಚಿತ್ರ DIPA ಚಿನ್ನದ ಪದಕ (Danube International Photo Association Gold Medal) ಪಡೆದುಕೊಂಡಿದೆ.

ನೀರಿನ ಮಹತ್ವದ ವಿಷಯ ವಸ್ತು ಒಳಗೊಂಡಿರುವ ಈ ಚಿತ್ರದಲ್ಲಿ ನೀರಿಲ್ಲದೆ ಬಿರುಕು ಬಿಟ್ಟ ನೆಲದಲ್ಲಿ ಒಂದರ ಹಿಂದೊಂದರಂತೆ ನೀರನ್ನು ಹುಡುಕುತ್ತ ಹೊರಟ ಕುರಿಗಳ ಸಾಲನ್ನು ಕಾಣಬಹುದಾಗಿದೆ. 69 ದೇಶಗಳ 261 ಛಾಯಾಗ್ರಾಹಕರ 3630 ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಬಲ್ಗೇರಿಯಾದ ವೆಲಿಕಾ ತೊಡರೋವಾ, ಸರ್ಬಿಯಾದ ಜೋರನ್ ಡಿಜೋರ್ಜೆವಿಕ್, ರೊಮೇನಿಯಾದ ಓವಿ ಡಿ ಪೋಪ್, ನಾರ್ತ್ ಮೆಸಿಡೋನಿಯಾದ ಡಿಜೆನ್ ಅಂಜೆಲೊವಸ್ಕಿ ತೀರ್ಪುಗಾರರಾಗಿದ್ದರು.

ಸೆ.25 ರಂದು ವಿಡಿನ್ ನಗರದ ನ್ಯಾಷನಲ್ ಮ್ಯೂಸಿಯಂ ನಲ್ಲಿ  ಬಹುಮಾನ ವಿತರಣೆ ಸಮಾರಂಭ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು  ಸಂಘಟಕ ಬೋರಿಸ್ಲೇವ್ ಮೈಲವನೋವಿಕ್ ತಿಳಿಸಿದ್ದಾರೆ.
Please follow and like us: