ದತ್ತಿ ಪ್ರಶಸ್ತಿಗಾಗಿ ಕಾವ್ಯ ಮತ್ತು ಕಥಾ ಸಂಕಲನ ಪುಸ್ತಕಗಳ ಆಹ್ವಾನ

ಕೊಪ್ಪಳ. 

 ಅರಳಿ ನಾಗರಾಜ್ ನಿವೃತ್ತ ನ್ಯಾಯಮೂರ್ತಿಗಳವರು ಲಿಂಗೈಕ್ಯ ಶ್ರೀ ಅಮರಪ್ಪ ಅಮರಗುಂಡಪ್ಪ ಸ್ಮರಣಾರ್ಥ ದತ್ತಿ ಹಾಗೂ ಲಿಂಗೈಕ್ಯ ಶ್ರೀಮತಿ ಜಡೆಮ್ಮ ಅಮರಗುಂಡಪ್ಪ ಅರಳಿ ಸ್ಮಾರಕದತ್ತಿ ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಬರಹಗಾರರಿಂದ ಕಾವ್ಯ ಮತ್ತು ಕಥಾ ಸಂಕಲನ ಕೃತಿಗಳನ್ನು ಆಹ್ವಾನಿಸಿದೆ.

ಕಾವ್ಯ ಕೃತಿಯ ಅರ್ಹ ಬರಹಗಾರರು ೨೦೨೧ ರ ಜನವರಿಯಿಂದ ೨೦೨೧ ರ ಡಿಸೆಂಬರ್ ಒಳಗಿನ ಪ್ರಕಟಿತ ಕಾವ್ಯ ಸಂಕಲನದ ಐದು ಪುಸ್ತಕಗಳನ್ನು ಕಳುಹಿಸುವದು .

ಕಥಾ ಸಂಕಲನದ ಅರ್ಹ ಬರಹಗಾರರು ೨೦೧೯ ರ ಜನವರಿಯಿಂದ ೩೧ ನೇ ಡಿಸೆಂಬರ್ ೨೦೨೧ ರ ಅವಧಿಯಲ್ಲಿ ಪ್ರಕಟಿತ ಕಥಾಸಂಕಲನದ ಐದು ಪ್ರತಿಗಳನ್ನು ಅರಳಿ ನಾಗಭೂಷಣ
ಅಮರೇಶ್ವರ್ ಎಂಟರ್ ಪ್ರೈಸಸ್ ಅರಳಿ ಕಾಂಪ್ಲೆಕ್ಸ್ ಸಿ.ಬಿ.ಎಸ್ ವೃತ್ತ ಗಂಗಾವತಿ ೫೮೩೨೨೭ ಈ ವಿಳಾಸಕ್ಕೆ ೧೦ ನೇ ಆಗಷ್ಟ ೨೦೨೨ ರ ಒಳಗಾಗಿ ಕಳುಹಿಸಿಕೊಡಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆಯ್ಕೆಗೊಂಡ ಪುಸ್ತಕದ ಕವಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ ಅಂಗಡಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ಸಂಪರ್ಕ ಸಂಖ್ಯೆ :೯೯೦೨೪೭೫೧೭೩ ಇವರನ್ನು ಸಂಪರ್ಕಿಸಲು ಕೋರಿದೆ.

Please follow and like us: