ರಸದೌತಣದ ಗೌತಮ್-ಸುಪ್ರಿಯಾ ವಿವಾಹ ಸಮ್ಮೇಳನ ….

ಕೊಪ್ಪಳ : ಸಾಹಿತಿ ದೇವೆಂದ್ರಪ್ಪ ಬಡಿಗೇರರ ಪುತ್ರನ ಮದುವೆ ಎಲ್ಲರಿಗೂ ಮಾದರಿಯಾಯ್ತು. ಇದೇನು ಸಾಹಿತ್ಯ ಸಮ್ಮೇಳನವೊ ಮದುವೆಯೋ ಎನ್ನುವಂತಹ ವಾತಾವರಣ. ನಾಡಿನ ಹಿರಿ ಕಿರಿಯ ಸಾಹಿತಿಗಳ, ಬರಹಗಾರ್ತಿಯರ ಸಮಾಗಮ, ಆಶೀರ್ವಾದ, ಹಾರೈಕೆ,ಶುಭಾಷಯಗಳು. ವದು ವರರಿಗೆ ಸುಖಿ ದಾಂಪತ್ಯ ಕ್ಕಾಗಿ‌ ಕಿವಿ ಮಾತುಗಳು. ಸವಿ ಸವಿಯಾದ ಭೋಜನ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಕಡಿಮೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಗಳೂ ಇಷ್ಟು ಅಚ್ಚುಕಟ್ಟಾಗಿ ನಡೆದಿರಲಿಲ್ಲ ಎನಿಸುವಂತೆ ನಡೆದ ಕಾರ್ಯಕ್ರಮ.

ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬೆರಗು ಪ್ರಕಾಶನದ ಡಿ.ಎಂ.ಬಡಿಗೇರ ಪ್ರತ್ರ ಗೌತಮ ಹಾಗೂ ವಿಜಯಪುರದ ಸುಪ್ರಿಯಾ ಅವರ ಮದುವೆಯಲ್ಲಿ ಕಂಡು ಬಂದ ದೃಶ್ಯಗಲಿವು. ಮಗನ ಮದುವೆಯನ್ನು ಸಾಹಿತ್ಯಿಕ ಸಂಭ್ರಮದ ಸಮ್ಮೇಳವನ್ನಾಗಿ ಬಡಿಗೇರ ಅವರು ಪರಿವರ್ತಿಸಿದ್ದರು.

ಸಮರಸ ದಾಂಪತ್ಯ ‘ ಕುರಿತ ಶಂಭು ಬಳಿಗಾರ ಮಾತನಾಡಿ ‘ಸಂಸಾರದಲ್ಲಿ ಏರಿಳಿತ ಸಾಮಾನ್ಯ . ಸಂಸಾರದಲ್ಲಿ ಬಾಗಿದವರು ಸುಖವಾಗಿ ಬಾಳುತ್ತಾರೆ ಇದೇ ಸುಖ ಸಂಸಾರದ ಗುಟ್ಟು ಎಂದರು ‘ ಸಂಸಾರದಲ್ಲಿ ಸುಖವಾಗಿ ಬಾಳಲು ಶ್ರೀಮಂತಿಕೆ ಬಡತನ ಕಾರಣ ಅಲ್ಲ . ಸಮರಸವೇ ದಾಂಪತ್ಯದ ನಿಜವಾದ ಗುಟ್ಟು ‘ ಎಂದರು. ಬಡವನಾದರು ಏನು ಪ್ರಿಯೆ ಖ್ಯಾತಿಯ ಕವಿ ಸತ್ಯಾನಂದ ಪಾತ್ರೋಟ ಮಾತನಾಡಿದರು.

ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮೊದಲ ಕವನ ಸಂಕಲನ ‘ ನೀನಾ ‘ ಮರುಮುದ್ರಣವನ್ನು ಬಿಡುಗಡೆ ಮಾಡಲಾಯಿತು.

ಹೇಮಾ ಪಟ್ಟಣಶೆಟ್ಟಿ ದಾಂಪತ್ಯದ ಕವನ ವಾಚನ ಮಾಡಿದರು ಹಿರಿಯ ಖ್ಯಾತ ಸಾಹಿತಿಗಳಾದ ಈರಪ್ಪ ಕಂಬಳಿ , ಎಚ್‌.ಎಸ್‌.ಪಾಟೀಲ್ ಸೇರಿದಂತೆ ಬಡಿಗೇರ್ ದಂಪತಿಗಳು, ಬಂಧು ಬಳಗದವರು ಪಾಲ್ಗೊಂಡಿದ್ದರು.

ಗೌತಮ್ -ಸುಪ್ರಿಯಾ ಮದುವೆ ನೆನಪಲ್ಲಿಟ್ಟುಕೊಳ್ಳುವಂತೆ ಮಾಡಿದರು.

Please follow and like us: