ಕುಷ್ಟಗಿ ಗೇಟ್ : ಅಂಬ್ಯುಲೆನ್ಸ್, ದ್ವಿಚಕ್ರ ವಾಹನಗಳಿಗೆ ಅವಕಾಶ-ಡಿಸಿ ಎಂ.ಸುರೇಶಬಾಬು

ಕೊಪ್ಪಳ : ಕುಷ್ಟಗಿ ರಸ್ತೆಯಲ್ಲಿರುವ ಎಲ್.ಸಿ ರೈಲ್ವೆ ಗೇಟ್ ನಂಬರ್ 66 ರ ಮೇಲ್ಸೇತುವೆ ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ಒಂದು ಹಂತಕ್ಕೆ ಬರುವ ತನಕ ಅಂಬ್ಯುಲೆನ್ಸ್,ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಸುರೇಶಬಾಬು ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ಎಲ್.ಸಿ ರೈಲ್ವೆ ಗೇಟ್ ನಂಬರ್ 66 ರ ಮೇಲ್ಸೇತುವೆ ಕಾಮಗಾರಿಯನ್ನ ಪ್ರಾರಂಭ ಮಾಡುವ ಸಂಭಂದವಾಗಿ ರೈಲ್ವೆ ಗೇಟನ್ನ ಬಂದ್ ಮಾಡಲಾಗಿರುವುದರಿಂದ ಕಾಳಿದಾಸ ನಗರ,ಬಜಾರಮಠ ಕಾಲೋನಿ,ಬೇಲ್ದಾರ ಕಾಲೋನಿ,ಸಿದ್ದೇಶ್ವರ ನಗರದ ನಿವಾಸಿಗಳು ರೈಲ್ವೆ ಗೇಟ್ ನ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ಆಗುವ ವರಗೆ ಸಂಚರಿಸಲು ಅವಕಾಶ ನೀಡುವಂತೆ ಧರಣಿ ಹಮ್ಮಿಕೊಂಡಿದ್ದರು.

ನಿನ್ನೆ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಅವರಿಗೆ ಕರೆ ಮಾಡಿ ರೈಲ್ವೆ ಗೇಟ್ ನ ಮೇಲ್ಸೇತುವೆ ಕಾಮಗಾರಿಯನ್ನ ಪ್ರಾರಂಭಿಸುವರೆಗೂ ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಮನವಿ ಮಾಡಿದ್ದರು.

ಇಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ರೈಲ್ವೆ ಇಲಾಖೆಯ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸಮ್ಮುಖದಲ್ಲಿ ಚರ್ಚೆ ನಡೆಸಿ ಕಾಮಗಾರಿ ಸಂಪೂರ್ಣ ವಾಗಿ‌ ಮುಕ್ತಾಯವಾಗುವುದಕ್ಕೆ ಎರಡು ವರ್ಷ ಬೇಕಾಗುತ್ತದೆ. ಈ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಕನಿಷ್ಠ ಒಂದು ವರ್ಷದ‌ಮಟ್ಟಿಗೆ ಅಂಬುಲೆನ್ಸ, ಚಕ್ಕಡಿ, ದ್ವಿಚಕ್ರ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲು ನಿರ್ಧರಿಸಲಾಯಿತು.

ಎಲ್ಲ ರೀತಿಯ ತೆರವು ಕಾರ್ಯಾಚರಣೆಗೆ ಸಹಕಾರ ನೀಡುವುದಾಗಿ ಸಾರ್ವಜನಿಕರೂ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರಡ್ಡಿ ಭೂಮಕ್ಕನವರ, ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಸೇರಿದಂತೆ ಇತರ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Please follow and like us: