ಕೊಪ್ಪಳ ಎಸಿಬಿ ಬಲೆಗೆ ಬಿದ್ದ ಕವಲೂರ ವಿಲೇಜ್ ಅಕೌಂಟೆಂಟ್

ಕೊಪ್ಪಳ : ಪಹಣಿ ತಿದ್ದಪಡಿಗೆ ೫೦೦೦ ರೂ ಲಂಚ ಕೇಳಿದ್ದ ವಿಲೇಜ್ ಅಕೌಂಟೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ.


ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಶಿವಪ್ಪ ತಂದೆ ಶಂಕರಪ್ಪ ಬೇವೋರು ಇವರು ತಮ್ಮ ತಂದೆಯ ಹೆಸರಿನಲ್ಲಿರುವ ಜಮೀನೀನ ಪಹಣಿ ತಿದ್ದುಪಡಿ ಮಾಡಲು ಕೊಪ್ಪಳ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಸದರಿ ತಿದ್ದುಪಡಿ ಮಾಡಲು ಕೊಪ್ಪಳ ತಹಶೀಲ್ದಾರ್ ಕಚೇರಿಯ ಕವಲೂರು ಗ್ರಾಮ ಲೆಕ್ಕಾಧಿಕಾರಿ ಕರೀಯಪ್ಪ ಎಂ ಹುಬ್ಬಳ್ಳೀ 5000 ರೂಪಾಯಿವರೆಗೂ ಖರ್ಚಾಗುತ್ತದೆ ಅಂತಾ ಹೇಳಿ ಅಡ್ವಾನ್ಸ್ ಆಗಿ ಅರ್ಜಿದಾರರಿಂದ 1000 ರೂ ಹಣವನ್ನು ಸ್ವೀಕರಿಸಿ ಬಾಕಿ 4000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಅರ್ಜಿದಾರ ಕೊಪ್ಪಳದ ಎಸಿಬಿ ಠಾಣೆಗೆ ದಿನಾಂಕ 19/07/2022 ರಂದು ಬಂದು ಈ ಬಗ್ಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಎಸಿಬಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಆರೋಪಿ ಕವಲೂರು ಗ್ರಾಮ ಲೆಕ್ಕಾಧಿಕಾರಿ ಕರೀಯಪ್ಪ ಎಂ ಹುಬ್ಬಳ್ಳೀ ಇವರು ಇಂದು ಮುಂಜಾನೆ 11-50ಗಂಟೆ ಸುಮಾರಿಗೆ ಕೊಪ್ಪಳದ ಸಿಂಪಿ ಲಿಂಗಣ್ಣ ರಸ್ತೆಯ ಟ್ರೀನಿಟಿ ಶಾಲೆಯ ಎದುರುಗಡೆಯಿರುವ ರೂಂ ನಲ್ಲಿ ಫಿರ್ಯಾದಿಯವರಿಂದ ತಾನು ಕೇಳಿದ್ದ 4000/- ರೂ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಳ್ಳಾರಿ ಎಸಿಬಿ SP ಹರಿಬಾಬು ರವರ ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಠಾಣೆಯ DSP ಶಿವಕುಮಾರ್ MC ರವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಇನ್ಸಪೆಕ್ಟರ್ ಶಿವರಾಜ್ ಇಂಗಳೆ, ಹಾಗು ಸಿಬ್ಬಂದಿಗಳಾದ ಶ್ರೀ ಸಿದ್ದಯ್ಯ, ರಂಗನಾಥ, ಗಣೇಶ್, ಜಗದೀಶ್, ಉಮೇಶ್, ಶ್ರೀಮತಿ ಸವಿತಾ, ಹಾಗು ಚಾಲಕರಾದ ಆನಂದ ಮತ್ತು ಬಸಪ್ಪ ರವರು ಭಾಗವಹಿಸಿದ್ದರು

Please follow and like us: