ಯಲಬುರ್ಗಾ ಸಿಡಿಪಿಓ ಆಗಿ ಸಿಂಧು ಯಲಿಗಾರ್ ಅಧಿಕಾರ ಸ್ವೀಕಾರ

: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕ ನೂತನ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಓ)ಯಾಗಿ ಸಿಂಧು ಯಲಿಗಾರ್ ಬುಧವಾರ (ಜು.06) ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಸಿಂಧು ಯಲಿಗಾರ್ ವರ್ಗಾವಣೆಗೂ ಮುಂಚೆ ಹೊಸಪೇಟೆ ತಾಲ್ಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಪೂರ್ವದಲ್ಲಿ  ಕೊಪ್ಪಳ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯಾಗಿ, ಮಹಿಳಾ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಧಿಕಾರ ಸ್ವೀಕಾರದ ವೇಳೆ ಹಿರಿಯ ಮೇಲ್ವಿಚಾರಕಿಯರಾದ  ಜಯಲಕ್ಷ್ಮಿ ಮೆಣಸಿನಕಾಯಿ, ಚೆನ್ನಮ್ಮ ಶ್ಯಾನಬೋಗರ ಸೇರಿದಂತೆ ಎಲ್ಲಾ ವಲಯಗಳ ಮೇಲ್ವಿಚಾರಕಿಯರು ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us: