ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ, ಕೆರೆಯ ಸೌಂದರ್ಯ ಹೆಚ್ಚಿಸಲು ಟಿ.ಕೃಷ್ಣಮೂರ್ತಿ ಸಲಹೆ

ಅಮೃತ ಸರೋವರ ಕಾಮಗಾರಿಗಳನ್ನು ವೀಕ್ಷಿಸಿದ ಜಿ.ಪಂ ಯೋಜನಾ ನಿರ್ದೇಶಕ

 ಕೊಪ್ಪಳ:

ಮೃತ ಸರೋವರ ಯೋಜನೆಯಡಿ ತಾಲೂಕಿನಲ್ಲಿ ಆಯ್ಕೆಯಾಗಿರುವ ಕೆರೆಗಳನ್ನು ಆಗಸ್ಟ್ 15 ರೊಳಗೆ ಶೀಘ್ರ ಅಭಿವೃದ್ಧಿಗೊಳಿಸುವಂತೆ ಜಿಲ್ಲಾ ಪಂಚಾಯತ್ ನಿರ್ದೇಶಕರಾದ ಟಿ.ಕೃಷ್ಣಮೂರ್ತಿಯವರು ಹೇಳಿದರು. ತಾಲೂಕಿನ ಕಲ್ ತಾವರಗೇರಾ, ವಣಬಳ್ಳಾರಿ, ಇಂದರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಮೃತಸರೋವರ ಯೋಜನೆಯಡಿ ಆಯ್ಕೆಗೊಂಡ ಕೆರೆಗಳನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸವಿನೆನಪಿಗಾಗಿ ಜಿಲ್ಲೆಯಲ್ಲಿ 93 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಗಾಗಿ ಕೊಪ್ಪಳ ತಾಲೂಕಿನಲ್ಲೂ ಕೂಡ 24 ಕೆರೆಗಳನ್ನು ಆಯ್ಕೆ ಮಾಡಿ, ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಳಿಸುವ ಕೆಲಸ ನಡೆದಿದೆ. ತಾಂತ್ರಿಕ ಸಹಾಯಕರು ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮುತುವರ್ಜಿ ವಹಿಸಿ, ವಿವಿಧ ಇಲಾಖೆಯ ಸಹಯೋಗದಲ್ಲಿ ಪರಿಣಾಮಕಾರಿಯಾಗಿ ಸರೋವರಗಳನ್ನು ಅನುಷ್ಟಾನಗೊಳಿಸಿ, ಕೆರೆಯ ಸೌಂದರ್ಯವನ್ನು ಹೆಚ್ಚಿಸಬೇಕು ಎಂದರು.

ಕಲ್ ತಾವರಗೇರಾ ಗ್ರಾ.ಪಂ ವ್ಯಾಪ್ತಿಯ ಹಾಲಹಳ್ಳಿ, ದನಕನದೊಡ್ಡಿ, ಕೆಂಚನದೋಣಿ, ಕೂಕನಪಳ್ಳಿ ಗ್ರಾಮದ ಕೆರೆ, ವಣಬಳ್ಳಾರಿ ಗ್ರಾ.ಪಂ.ಯ ದಿಡುಗು ಕೆರೆ ಮತ್ತು ಮೆತಗಲ್ ಕೆರೆ ಸೇರಿದಂತೆ ಇಂದರಗಿ ಗ್ರಾಮದ ಹೊಸ ಕೆರೆಗಳನ್ನು ವೀಕ್ಷಿಸಲಾಯಿತು. ಇದಕ್ಕೂ ಮುನ್ನ ಕಲ್ ತಾವರಗೇರಾ ಹಾಗೂ ಜಿನ್ನಾಪುರ ತಾಂಡಾದಲ್ಲಿ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದರು.

ನಂತರ ಗುಳದಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಎಲ್.ಡಬ್ಲ್ಯೂಎಂ ಕಾಮಗಾರಿ ಸೇರಿದಂತೆ ಶಾಲಾ ಕಾಮಗಾರಿಗಳನ್ನು ಯೋಜನಾ ನಿರ್ದೇಶಕರು ವೀಕ್ಷಿಸಿ, ಕಾಮಗಾರಿಯನ್ನು ಆದಷ್ಟು ಬೇಗಾ ಮುಗಿಸುವಂತೆ ತಿಳಿಸಿದರು.ಈ ವೇಳೆ ಆರ್.ಡಬ್ಲ್ಯೂಎಸ್ ಇಲಾಖೆಯ ಎಇಇ ವಿಲಾಸ್ ಬೋಸ್ಲೆ, ಸಹಾಯಕ ನಿರ್ದೇಶಕರಾದ ಸೌಮ್ಯ ಕೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಬೆಟದಪ್ಪ, ನಾಗರಾಜ್, ಶಿವಬಸಪ್ಪ ಹಾಗೂ ತಾಂತ್ರಿಕ ಸಂಯೋಜಕರಾದ ವಿಶ್ವನಾಥ ಜಿ, ಐಇಸಿ ಸಂಯೋಜಕ ಶಿವಕುಮಾರ್ ಕೆ, ತಾಂತ್ರಿಕ ಸಹಾಯಕರಾದ ಸಯ್ಯದ್ ಪಾಶಾ, ಕೊಟ್ರೇಶ್ ಜವಳಿ, ಲಕ್ಷ್ಮೀ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಯವರು ಇದ್ದರು.

Please follow and like us: