ಭಾಗ್ಯನಗರ ಜು.05 ರಂದು ವಿದ್ಯುತ್ ವ್ಯತ್ಯಯ POWER CUT

: ಜೆಸ್ಕಾಂ ಕೊಪ್ಪಳ ವ್ತಾಪ್ತಿಯಲ್ಲಿ ತುರ್ತು ದುರಸ್ಥಿ ಕೆಲಸ ನಡೆಸುತ್ತಿರುವ ಪ್ರಯುಕ್ತ ಎಫ್-8 ಭಾಗ್ಯನಗರ ಫೀಡರ್‌ಗೆ ಒಳಪಡುವ ವಿವಿಧ ಪ್ರದೇಶಗಳಲ್ಲಿ ಜುಲೈ 05 ರಂದು ಬೆಳಿಗ್ಗೆ 09.30 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕಲ್ಯಾಣ ನಗರ, ಕುಷ್ಟಗಿ ರಸ್ತೆ, ಪ್ರಗತಿ ನಗರ, ಎನ್.ಜಿ.ಒ ಕಾಲೋನಿ, ಹಳೇ ಭಾಗ್ಯನಗರ, ಕೀರ್ತಿ ಕಾಲೋನಿ, ಶಾಸ್ತಿç ಕಾಲೋನಿ, ಪ್ರಗತಿ ನಗರ, ಪಾನಗಂಟಿ ಕಲ್ಯಾಣ ಮಂಟಪ, ಯತ್ನಟ್ಟಿ ಹಾಗೂ ಹುಚ್ಚೀಶ್ವರ ಕ್ಯಾಂಪ್ ಸುತ್ತಮುತ್ತಲಿನ  ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ದುರಸ್ಥಿ ಕೆಲಸವು ಬೇಗನೆ ಮುಗಿದಲ್ಲಿ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ವಿದ್ಯುತ್ ದುರಸ್ಥಿ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us: