ಕಾಮುಕ ಶಿಕ್ಷಕ ಗೋವಾದಲ್ಲಿ ಅರೆಸ್ಟ್

ಕೊಪ್ಪಳ : ಕಾರಟಗಿಯ ಕಾಮುಕ ಶಿಕ್ಷಕನನ್ನು ಕೇವಲ ೨೪ ಗಂಟೆಯೊಳಗೆ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಧನೂರು ತಾಲೂಕು ಸಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಕ ಮಹ್ಮದ್ ಅಜರುದ್ದೀನ ಈತನು ಕಾರಟಗಿ ಪಟ್ಟಣದಲ್ಲಿ ವಾಸವಿರುವ ಬಾದಿತ ಮಹಿಳೆಗೆ ಅತ್ಯಾಚಾರ ಮಾಡಿದ ಬಗ್ಗೆ ನಂತರದ ದಿನಗಳಲ್ಲಿ ಮಹಿಳೆ ಇದಕ್ಕೆ ಒಪ್ಪದಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ಜೊತೆಯಲ್ಲಿ ಮಲಗಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಬಗ್ಗೆ ಬಾದಿತ ಮಹಿಳೆ ನೀಡಿದ ಫಿರ್ಯಾದಿ ಮೇಲಿಂದ ದಿನಾಂಕ -02.07.2022 ರಂದು ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ -140 / 2022 ಕಲಂ -376 , 354 , 355 , 323 , 504 , 506 ಐ.ಪಿ.ಸಿ ಮತ್ತು ಐ.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಪ್ರಕರಣ ದಾಖಲಾದ ತಕ್ಷಣ ಪರಾರಿಯಾಗಿದ್ದ ಆಪಾದಿತ ಸರ್ಕಾರಿ ಶಾಲಾ ಶಿಕ್ಷಕ ಮಹ್ಮದ್ ಅಜರುದ್ದೀನ ಈತನ ಪತ್ತೆ ಕುರಿತು ಎಸ್.ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಶ್ರೀ ಆರ್.ಎಸ್.ಉಜ್ಜನಕೊಪ್ಪ ಡಿವೈ.ಎಸ್.ಪಿ ಗಂಗಾವತಿ ಮತ್ತು ಶ್ರೀ ವಿ.ಎಸ್ . ಹಿರೇಮಠ ಪಿ.ಐ ಕಾರಟಗಿ ಠಾಣೆ ರವರ ನೇತೃತ್ವದಲ್ಲಿ ಸಿಹೆಚ್‌ಸಿ -147 ತಾರಾಸಿಂಗ್ , ಸಿಹೆಚ್‌ಸಿ -40 ಸುರೇಶ ಮತ್ತು ಸಿಪಿಸಿ -246 ನಾಗರಾಜ ರವರನ್ನು ಒಳಗೊಂಡ ತಂಡವು ಮಾಹಿತಿ ಸಂಗ್ರಹಿಸಿ ಹೊರರಾಜ್ಯವಾದ ಗೋವಾಕ್ಕೆ ಹೋಗಿ ಇಂದು ಬೆಳಗಿನ ಜಾವ ಆಪಾದಿತನನ್ನು ಗೋವಾದಲ್ಲಿ ಪತ್ತೆ ಮಾಡಿಕೊಂಡು ವಾಪಸ್ ಬಂದು ದಸ್ತಗಿರಿ ಕ್ರಮ ಅನುಸರಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಇರುತ್ತದೆ . ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಆಪಾದಿತನನ್ನು ಪತ್ತೆ ಮಾಡಲು ಶ್ರಮಿಸಿದ ವಿಶೇಷ ಪತ್ತೆ ತಂಡದ ಅಧಿಕಾರಿ / ಸಿಬ್ಬಂದಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ಕಾರ್ಯಾಲಯದ ಹೆಚ್ಸಿ -36 ಕೋಟೇಶ ಮತ್ತು ಎಪಿಸಿ ಪ್ರಸಾದ ರವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Please follow and like us: