ಗಣೇಶ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯ ಪೂರ್ವಭಾವಿ ಸಭೆ


ಕೊಪ್ಪಳ: ಜು.೦೩, ಇಲ್ಲಿನ ಭಾಗ್ಯನಗರ ಪಟ್ಟಣದಲ್ಲಿ ಗಣೇಶ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕುರಿತು ಇಂದು ಪೂರ್ವಭಾವಿ ಸಭೆ ನಡೆಯಿತು. ಭಾಗ್ಯನಗರ ಪಟ್ಟಣದ ೬-೭ ನೇ ವಾರ್ಡಿನಲ್ಲಿ ಈಗಾಗಲೇ ನಿರ್ಮಾಣವಾಗಿರುವ ದೇವಸ್ಥಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಕುರಿತಂತೆ ಗಣೇಶ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆಗಷ್ಟ್ ೨೪ ಮತ್ತು ೨೫ ರಂದು ಎರಡು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆಯ ಕುರಿತಂತೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ೨೪ ಮತ್ತು ೨೫ ರಂದು ಗಣೇಶಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಸಲು. ಪೂರ್ವಭಾವಿ ಸಭೆಯಲ್ಲಿ ಹಿರಿಯರಾದ ಮೋಹನ್ ಮೇಘರಾಜ, ಪಂಪಣ್ಣ ಕೆಂಚಗುಂಡಿ, ಮೋಹನ್ ಪವಾರ, ದೇವಪ್ಪ ಮಗಜಿ, ಪರಶುರಾಮ್ ನಾಯಕ, ಮೋಹನ್ ಅರಕಲ್, ನಾರಾಯಣಪ್ಪ ಬೆಟಗೇರಿ, ವೀರಣ್ಣ ಕಬ್ಬೇರ್, ಈರಣ್ಣ ಬೆಟಗೇರಿ, ಶಂಕರ್ ದಲಬಂಜನ್, ರವಿ ದಲಬಂಜನ, ಗ್ರಾಮದ ಯುವಕರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದು ಇದೇ ಸಂದರ್ಭದಲ್ಲಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು ಎಂದು ಪ್ರಚಾರ ಸಮಿತಿಯ ಉಸ್ತುವಾರಿ ರಾಮಣ್ಣ ಗೋಂದಕರ್ ತಿಳಿಸಿದ್ದಾರೆ.

Please follow and like us: