ವಾರ್ಡ ಸಮಸ್ಯೆಗಳಿಗೆ ಮುಕ್ತಿ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : 02  ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ಕೊಪ್ಪಳ ನಗರದ 1ನೇ ವಾರ್ಡ್ ಗೆ ಭೇಟಿ ನೀಡಿ ಜನಸಂಪರ್ಕ ಸಭೆಯನ್ನ ಹಮ್ಮಿಕೊಂಡು ಜನರ ಕುಂದು ಕೊರತೆಗಳನ್ನ ಆಲಿಸಿದರು. ನಗರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ  ಜರುಗಿದ ಸಭೆಯಲ್ಲಿ ಶಾಸಕರು ಜನರ ಅಹವಾಲುಗಳನ್ನ ಆಲಿಸಿ ಅಧಿಕಾರಿಗಳಿಂದ ಪರಿಹಾರ ಒದಗಿಸಿ ಕೊಡುವ ಕೆಲಸ ಮಾಡಿದರು.

ನಂತರ ಮಾತನಾಡಿದ  ಶಾಸಕರು ವಾರ್ಡಿನ ಜನರ ಸಮಸ್ಯೆಗಳಿಗೆ ತತಕ್ಷಣದಲ್ಲಿ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಪ್ರಮುಖವಾಗಿ ವಾರ್ಡ್ ನಲ್ಲಿ ಸ್ವಚ್ಛೆತೆಯನ್ನ ಕಾಪಾಡಿ ವಾರಕೊಮ್ಮೆ  ವಾರ್ಡ್ ಗಳಿಗೆ ಭೇಟಿ ನೀಡಲು ತಾಕಿತು ಮಾಡಿದರು.  ಪ್ರಮುಖವಾಗಿ ಚರಂಡಿಗಳನ್ನ ಸ್ವಚ್ಛತೆ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಡ್ ನ ಅನೇಕ ಕಡೇ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ವಾರ್ಡ್ ನಲ್ಲಿ ಜನರು ಏನೇನ್ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡಿದ್ದಾರೆ ಅವುಗಳಿಗೆ ಸ್ಪಂದಿಸಿ ನನಗೆ ವಾಟ್ಸಪ್ ಮಾಡಬೇಕು ಎಂದು ಅಧಿಕಾರಿಗಳಿಗೆ   ಶಾಸಕರು ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಶಿವಗಂಗ ಶಿವರೆಡ್ಡಿ ಭೂಮಕ್ಕನವರ್,ಉಪಾಧ್ಯಕ್ಷರಾದ ಆಯೇಷಾ ಬೇಗಂ ,ಮಾಜಿ ಉಪಾಧ್ಯಕ್ಷರು ಜರೀನಾ ಬೇಗಂ ,ನಗರಸಭೆಯ ಸದಸ್ಯರಾಧ ಅಮ್ಜದ ಪಟೇಲ್ ,ಮಹೇಂದ್ರ ಚೋಪ್ರಾ,ಮುತ್ತುರಾಜ್ ಕುಷ್ಟಗಿ ,ಬಸಯ್ಯ ಹಿರೇಮಠ,ಅಜೀಮ್ ಅತ್ತರ್,ವಿರುಪಾಕ್ಷಿ ಯಲ್ಲಮ್ಮನವರ್,ಅರಣ ಅಪ್ಪುಶೆಟ್ಟಿ ,ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಕಾಟನ್ ಪಾಷ ,ಮುಖಂಡರಾದ ಶಿವಕುಮಾರ ಶೆಟ್ಟರ,ವಿರಣ್ಣ ಸಂಡೂರು ಮಹೆಬೂಬ್ ಅರಗಂಜಿ ವಕ್ತಾರ ಅಕ್ಬರ್ ಪಲ್ಟನ್ ಸೇರಿದಂತೆ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು

Please follow and like us: