ಜಾಗತೀಕರಣದ ಯುಗದಲ್ಲಿ ಕೌಶಲ್ಯಾಧಿರಿತ ಶಿಕ್ಷಣವನ್ನು ಪಡೆದುಕೊಳ್ಳಬೇಕು -ಪ್ರೊ. ಓಂಕಾರ ಗೌಡ ಕಾಕಡೆ

ಉನ್ನತ ಶಿಕ್ಷಣದ ಮಾಧ್ಯಮದಲ್ಲಿ ವಿಫಲ ಅವಕಾಶಗಳು ಇವೆ. ಎಲ್ಲ ವಿದ್ಯಾರ್ಥಿನಿಯರುಗಳು ಉನ್ನತ ಶಿಕ್ಷಣವನ್ನು ಅದರಲ್ಲೂ ಪತ್ರಿಕೋದ್ಯಮದ ವಿಭ್ಯಾಸಭ್ಯ್ಯಾಸವನ್ನು ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಓಂಕಾರ ಗೌಡ ಕಾಕಡೆ ಅವರು ಹೇಳಿದರು.
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು ಅಂತರಿಕ ಭರವಸೆ ಕೋಶ, ಉದ್ಯೋಗ ಕೋಶ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಮಾಧ್ಯಮದಲ್ಲಿ ಉನ್ನತ ಶಿಕ್ಷಣದ ಅವಕಾಶಗಳು ಎಂಬ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳನು ಓದಬೇಕು. ಪತ್ರಿಕೆಗಳ ಓದುವುದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆ. ಅಂಗ್ಲ ಭಾಷೆಯ ಪತ್ರಿಕೆಗಳನ್ನು ಓದಬೇಕು. ನೀವು ಸ್ನಾತಕೊತ್ತರ ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಕಲಿತರೆ ಬಹಳಷ್ಟು ಉದ್ಯೋಗದ ಅವಕಾಶಗಳು ಇವೆ. ನೀವು ಪತ್ರಕರ್ತರಾದ ನಂತರ ಪ್ರತಿಯೋಂದು ಸುದ್ದಿಯನ್ನು ಸಂಶಯದಿಂದ ನೋಡಬೇಕು. ಜೀವನದಲ್ಲಿ ಗುರಿ ಇರಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸಬಾರದು. ನೀವು ನಿಮ್ಮ ಜೀವನದ ಜೊತೆಗೆ ಇನ್ನೊಬ್ಬರ ಜೀವನವನ್ನು ಸುಧಾರಣೆ ಮಾಡುವ ಕಡೆ ಗಮನ ಕೊಡಬೇಕು. ಇಂದಿನ ಜಾಗತೀಕರಣದ ಯುಗದಲ್ಲಿ ಕೌಶಲ್ಯಾಧಿರಿತ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾಧ ಡಾ. ಗಣಪತಿ ಕೆ. ಲಮಾಣಿಯವರು ವಹಿಸಿದ್ದರು. ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ. ನರಸಿಂಹ. ವಾಸುದೇವ ಬುರ್ಲಿ ಇದ್ದರು. ಪೂಜಾ ನಿರೂಪಿಸಿದರು. ಸಂಗೀತ ಸಾಲಿಮಠ ಸ್ವಾಗತಿಸಿದರು. ಸುಮನ್ ಹಿರೆಮಠ ವಂದಿಸಿದರು. ಡಾ. ನರಸಿಂಹ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

Please follow and like us: