ಅತ್ಯಾಚಾರ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆ

ಕೊಪ್ಪಳ, : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿತರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ  [ಪೋಕ್ಸೊ] ಶ್ರೀ ಶಂಕರ ಎಂ. ಜಾಲವಾದಿ  ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.


ಪ್ರಕರಣದ 1ನೇ ಆರೋಪಿ ಗದ್ದಿಗೇರಿ ತಾಂಡಾದ ಸಂತೋಷ ನಾಯಕ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪ್ರೀತಿಸುತ್ತಿರುವುದಾಗಿ, ಅಮರೇಶ ನಾಯಕ ಹಾಗೂ ಲಕ್ಷಿö್ಮ ನಾಯಕ ಇವರ ಸಹಾಯದಿಂದ   ದಿ: 24-04-2016 ರಂದು ಬಾಧಿತಳ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಕೊಪ್ಪಳದಲ್ಲಿ ನರ್ಸ್ ಕೆಲಸ ಇದೆ ಎಂದು ಸುಳ್ಳು ಹೇಳಿ ಬಾಧಿತಳನ್ನು ಕೊಪ್ಪಳಕ್ಕೆ ಕರೆಸಿಕೊಂಡಿದ್ದನು. ನಗರದ ಅಕ್ಷರ ಆಸ್ಪತ್ರೆಯಲ್ಲಿ ಬಾಧಿತಳು ಕೆಲಸ ನಿರಾಕರಿಸಿದ್ದಕ್ಕೆ ಒತ್ತಾಯಪೂರ್ವಕವಾಗಿ ಮೋಟಾರ್ ಸೈಕಲ್‌ನಲ್ಲಿ ಹತ್ತಿಸಿಕೊಂಡು, ಅಪಹರಣ ಮಾಡಿಕೊಂಡು ಬೆಂಗಳೂರಿನ ಆನೇಕಲ್‌ಗೆ ಹೋಗಿ ಮದುವೆಯಾಗಿದೆ ಎಂದು ಹೇಳಿ ಒಂದು ಬಾಡಿಗೆ ಮನೆಯನ್ನು ಪಡೆದು ರೂಮಿನಲ್ಲಿ ಕೂಡಿಹಾಕಿದ್ದನು. ಪ್ರೀತಿಸುವಂತೆ ಒತ್ತಾಯ ಮಾಡಿ ಕೈಯಿಂದ ಹಲ್ಲೆ ಮಾಡುತ್ತ  ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಲ್ಲಿ ಸಾಯಿಸುವುದಾಗಿ  ಜೀವದ ಹೆದರಿಕೆ ಹಾಕಿದ್ದನು.
ಅಲ್ಲದೆ ದಿ: 08-05-2016 ರಂದು ರಾತ್ರಿ ಬಾಧಿತ ಬಾಲಕಿಗೆ ಕೈ ಕಾಲು ಮತ್ತು ಬಾಯಿಗೆ ಬಟ್ಟೆ ಕಟ್ಟಿ ಬಲಾತ್ಕಾರ ಸಂಭೋಗ ಮಾಡಿದ್ದು ಮತ್ತು ಅವಳ ಕಿವಿಯಲ್ಲಿದ್ದ ಬಂಗಾರದ ಆಭರಣ, ಕಾಲಲ್ಲಿದ್ದ ಬೆಳ್ಳಿ ಚೈನುಗಳನ್ನು ಕಿತ್ತುಕೊಂಡು ಊಟ ಕೊಡದೆ ರೂಮಿನಲ್ಲಿ ಕೂಡಿ ಹಾಕಿದ್ದನು. ಆರೋಪಿ ಅಮರೇಶ ಹಾಗೂ ಲಕ್ಷಿö್ಮÃ ಇವರು ಸಂತೋಷ ನಾಯಕ ಇತನಿಗೆ ಬಾಧಿತಳನ್ನು ಅಪಹರಣ ಮಾಡಿಕೊಂಡು ಹೋಗಲು ಪ್ರಚೋದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯಲ್ಲಿ ಆರೋಪಿತರ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಆರೋಪಿತರ ವಿರುದ್ದ ಎಎಸ್‌ಐ ನಾಗಪ್ಪ ಇವರ ಸಹಾಯದೊಂದಿಗೆ ಕೊಪ್ಪಳ ನಗರ ಠಾಣೆ ಪಿಐ ಸತೀಶ ಪಾಟೀಲ ಇವರು  ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಗದ್ದಿಗೇರಿ ತಾಂಡಾದ ಮೊದಲನೇ ಆರೋಪಿ ಸಂತೋಷ ನಾಯಕ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ಕ್ರಮವಾಗಿ 07 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 20,000 ಗಳ ದಂಡವನ್ನು ವಿಧಿಸಿ, ದಂಡದ ಮೊತ್ತದಲ್ಲಿ ರೂ.10,000 ಗಳನ್ನು ಭಾದಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ಆದೇಶಿಸಲಾಗಿದೆ. ಎರಡನೇ ಆರೋಪಿ ಅಮರೇಶ ನಾಯಕನಿಗೆ 03 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000 ಗಳ ದಂಡವನ್ನು ಹಾಗೂ ಮೂರನೇ ಆರೋಪಿ ಲಕ್ಷಿö್ಮÃ ನಾಯಕ ಇವರಿಗೆ 04 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000 ಗಳ ದಂಡವನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ  ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.

Please follow and like us: