ಪ್ರಗತಿಪರ ಚಿಂತಕರಿಗೆ, ನ್ಯಾಯಾವಾದಿಗಳಿಗೆ, ಪ್ರಜಾಪ್ರಭುತ್ವವಾದಿಗಳಿಗೆ ಸೂಕ್ತ ರಕ್ಷಣೆಗೆ ಆಗ್ರಹ

ಕೊಪ್ಪಳ : ಮಾನವ ಹಕ್ಕುಗಳ ಹೋರಾಟಗಾರ್ತಿ ಗುಜರಾತಿನ ತೀಸ್ತಾ ಸೆಟಲ್‌ವಾಡ್ ಶ್ರೀ ಕುಮಾರ, ಮಹಮ್ಮದ ಜುಬೇರ್ ಇವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವುದು  ಮತ್ತು ಪ್ರಗತಿಪರ ಚಿಂತಕರಿಗೆ, ನ್ಯಾಯಾವಾದಿಗಳಿಗೆ, ಪ್ರಜಾಪ್ರಭುತ್ವವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ

ದೇಶದಲ್ಲಿ ಕೆಲವು ದಿನಗಳಿಂದ ಪ್ರಜಾತಂತ್ರವಾದಿ, ನ್ಯಾಯಾವಾದಿಗಳು, ಚಿಂತಕರು, ಹೋರಾಟಗಾರರು, ಪತ್ರಕರ್ತರ ಬಂಧನಗಳು ಸರಣಿ ರೂಪದಲ್ಲಿ ಮುಂದುವರೆದಿದೆ. ಈ ಭಯದ ವಾತಾವರಣವು ದೇಶದ ಎಲ್ಲಾ ಪ್ರಜ್ಞಾವಂತ ಪ್ರಜೆಗಳಲ್ಲಿ ಆತಂಕವನ್ನುಂಟು ಮಾಡಿದೆ. ಒಂದೇ ವಾರದಲ್ಲಿ ಧಮನಕಾರಿ ನೀತಿಗಳು, ರಕ್ತದಾಹಿ ದಾಳಿಗಳು ನಿರಂತರವಾಗಿ ಮುಂದುವರೆದಿವೆ. ಸರಕಾರದ ನೀತಿಗಳನ್ನು ಪ್ರಶ್ನಿಸುವವರನ್ನು, ವಿರೋಧಿಸುವವರನ್ನು ಬೆನ್ನಟ್ಟಿ ಬಂಧಿಸಲಾಗುತ್ತಿದೆ.

    ಗುಜರಾತ ಗಲಭೆಯಲ್ಲಿ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‌ಚಿಟ್ ಕೊಟ್ಟ ಹಿನ್ನಲೆಯಲ್ಲಿ ಗೃಹ ಮಂತ್ರಿ ಅಮಿತ ಶಾ ಮತ್ತು ಹಲವು ರಾಜ್ಯದ ಪೊಲೀಸರು ಸೇಡಿನ ರಾಜಕಾರಣ ಆರಂಭಿಸಿದ್ದಾರೆ. ಸುಳ್ಳು ಆರೋಪದ ಮೇಲೆ ತೀಸ್ತಾ ಸೆಟಲ್‌ವಾಡ್ ಅವರನ್ನು ವಿಚಾರಣೆಯ ಹೆಸರಿನಲ್ಲಿ ಕಷ್ಟಡಿಗೆ ತೆಗೆದುಕೊಂಡು ಬಂಧಿಸಲಾಗಿದೆ. ಇದು ಘೋರ ಅನ್ಯಾಯ ಸರ್ವಾಧಿಕಾರಿಗಳ ದಬ್ಬಾಳಿಕೆಯಾಗಿದೆ. ಇದಲ್ಲದೇ ಶ್ರೀ ಕುಮಾರ ಹಾಗೂ ಮಹಮ್ಮದ ಜುಬೇರ್ ಮೊದಲಾದವರನ್ನು ಇದೇ ವಾರದಲ್ಲಿ ಬಂಧನಕೊಳಪಡಿಸಲಾಗಿದೆ. ಈ ಬೆಳವಣಿಗೆ ದೇಶದ ಪ್ರಜಾತಂತ್ರವು ದೊಡ್ಡ ಅಪಾಯದಲ್ಲಿದೆ ಎಂಬುದು ಸ್ಪಷ್ಟವಾಗುತ್ತಿದೆ.

    ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿದ್ದ, ಚಿಂತಿಸುತ್ತಿದ್ದ ಸುಧಾ ಬಾರದ್ವಾಜ್, ಆನಂದ ತೇಲತುಂಬ್ಡೆ, ವರವರ್‌ರಾವ್ ಇವರನ್ನು ಈಗಾಗಲೇ ವರ್ಷಗಟ್ಟಲೇ ಜೇಲಿನಲ್ಲಿ ಕೊಳೆಹಾಕಲಾಗಿದೆ. ಮಾನವತೆಯ ಪ್ರತಿರೂಪವಾಗಿದ್ದ ಫಾದರ್ ಸ್ಟ್ಯಾನ್ ಸ್ವಾಮಿಯವರನ್ನು ೮೦ನೇ ವಯಸ್ಸಿನಲ್ಲಿ ಬಂಧಿಸಿ, ಚಿಕಿತ್ಸೆಗೆ ಅವಕಾಶ ನೀಡದೇ ಸಾವಿಗೆ ದೂಡಲಾಗಿದೆ. ಇದಲ್ಲದೇ ನಿನ್ನೆ ರಾಜಸ್ಥಾನದ ಉದಯಪೂರದಲ್ಲಿ ಮೂಲಭೂತವಾದಿ ಯುವಕರಿಬ್ಬರು ಕನ್ಹಯ್ಯಲಾಲ್ ಎಂಬ ಟೇಲರ್‌ನ್ನು ಹತ್ಯೆ ಮಾಡಿ ಕ್ರೂರಕೃತ್ಯವೆಸಗಿದ್ದಾರೆ. ಇದು ಅತ್ಯಂತ ಆತಂಕಕಾರಿ ದುರ್ಘಟನೆ. ಧಾರ್ಮಿಕ ಮತಾಂಧರ ಅತಿರೇಕರದ ಕೃತ್ಯಗಳು ದೇಶದ ಪರಿಸ್ಥಿತಿಯನ್ನು ಹದೆಗೆಡಿಸಿ, ಪರಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಒಯ್ಯುತ್ತಿದೆ.

    ತಾವುಗಳು ಮೇಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಗಾರರನ್ನು, ಚಿಂತಕರನ್ನು ರಕ್ಷಿಸಲು ಮುಂದಾಗಬೇಕೆಂದು   ಡಿ.ಎಚ್.ಪೂಜಾರ   ಬಸವರಾಜ ಶೀಲವಂತರ , ಮಹಾಂತೇಶ ಕೊತಬಾಳ, ನಜೀರಸಾಬ್ ಮೂಲಿಮನಿ,ಬಸವರಾಜ ನರೇಗಲ್ ,ಶಿವಪ್ಪ ಹಡಪದ ಒತ್ತಾಯಿಸಿದ್ದಾರೆ.

Please follow and like us: