ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸೋಮಶೇಖರಗೌಡ ಆಯ್ಕೆ

ಕೊಪ್ಪಳ : ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಗಂಗಾವತಿಯ ಬಾಲಕರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಸೋಮಶೇಖರಗೌಡ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಎ.ಜಿ.ತಿಮ್ಮಾಪೂರ ತಿಳಿಸಿದ್ದಾರೆ.


ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷತೆಗಾಗಿ ನಡೆದ ಚುನಾವಣೆಯಲ್ಲಿ ಕೊಪ್ಪಳ ತಾಲೂಕಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಪತ್ರೆಪ್ಪ ಛತ್ತರಕಿ ಹಾಗೂ ಗಂಗಾವತಿಯ ಬಾಲಕರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಸೋಮಶೇಖರಗೌಡ ಅವರ ನಡುವೆ ಸ್ಪರ್ಧೆ ನಡೆದು ಮತದಾನ ನಡೆಯಿತು. ಸೋಮಶೇಖರಗೌಡ ಅವರು ೧೮ ಮತಗಳನ್ನು ಪಡೆಯುವುದರ ಮೂಲಕ ಜಯಶಾಲಿಗಳಾದರು. ಪತ್ರೆಪ್ಪ ಛತ್ತರಕಿ ಅವರು ಕೇವಲ ೮ ಮತಗಳನ್ನು ಪಡೆಯುವುದರ ಮೂಲಕ ಪರಾಭವಗೊಂಡರು. ಈ ಚುನಾವಣೆಯಲ್ಲಿ ಕೊಪ್ಪಳ, ಯಲಬುರ್ಗಾ, ಕುಕನೂರ, ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಉಪನ್ಯಾಸಕರ ಸಂಘದ ನಿರ್ದೇಶಕರು ಮತ ಚಲಾಯಿಸಿದರು. ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾದ ಮಾರುತಿ ಲಕಮಾಪೂರ, ಪ್ರಧಾನ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಹೊಳಗುಂದಿ, ಖಜಾಂಚಿಯಾದ ಸಂಜಯ ಬಡಿಗೇರ, ರಾಜ್ಯಪರಿಷತ್ ಸದಸ್ಯರಾದ ಕೆ.ಎಸ್.ಹುಲಿ, ಉಪನ್ಯಾಸಕರ ಸಂಘದ ಕುಕನೂರು ತಾಲೂಕಾಧ್ಯಕ್ಷರಾದ ಡಾ.ಫಕೀರಪ್ಪ ವಜ್ರಬಂಡಿ, ಯಲಬುರ್ಗಾ ತಾಲೂಕಾಧ್ಯಕ್ಷರಾದ ಈಶಪ್ಪ ಮಳಗಿ, ಗಂಗಾವತಿ ತಾಲೂಕಾಧ್ಯಕ್ಷರಾದ ಮಹೆಬೂಬ ಅಲಿ, ಕಾರಟಗಿ ತಾಲೂಕಾಧ್ಯಕ್ಷರಾದ ಮಹಾಬಳೇಶ್ವರ, ಕನಕಗಿರಿ ತಾಲೂಕಾಧ್ಯಕ್ಷರಾದ ಇಮಾಮಸಾಹೇಬ ಹಡಗಲಿ, ಪ್ರಾಚಾರ್ಯರಾದ ಜಿ.ಎಂ.ಭೂಸನೂರಮಠ, ಬಸಪ್ಪ ನಾಗೋಲಿ, ಎಚ್.ಬಿ.ಜಗ್ಗಲ್, ಎಚ್.ಎಸ್.ಬಾರಕೇರ, ಉಪನ್ಯಾಸಕರಾದ ರಮೇಶ ಹೇಮರೆಡ್ಡಿ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಗಂಗಾಧರ ಅವಟೇರ, ಮಾರೆಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹರ್ಷ: ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸೋಮಶೇಖರಗೌಡ ಆಯ್ಕೆಯಾಗಿದ್ದಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಜಿ.ರವಿಕುಮಾರ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಅನೀಲಕುಮಾರ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us: