ದೇಶದಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ-ಸಂತೋಷ ಲಾಡ್

ಪಕ್ಷ ಹೊಸ ಆಲೋಚನೆ ಮಾಡಲು ಸಂಕಲ್ಪ ಮಾಡಿದೆ : ಸಂತೋಷ ಲಾಡ್
ಕೊಪ್ಪಳ, ಜೂ. ೩೦ : ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜನರ ಮನಸ್ಸಿನ ಮಾತುಗಳನ್ನು ಮೆನಿಫೆಷ್ಟೋದಲ್ಲಿ ಸೇರಿಸಬಹುದಾದ ವಿಭಿನ್ನ ವಿಚಾರಗಳನ್ನು ಜನರಿಂದ ಪಡೆಯಲು ವಿಶೇಷ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಅವರು ಅಭಿಪ್ರಾಯಪಟ್ಟರು.


ನಗರದ ಶಿವಶಾಂತ ಮಂಗಲ ಭವನದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವ ಸಂಕಲ್ಪ ಚಿಂತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹೊಸ ಹೊಸ ಐಡಿಯಾಗಳನ್ನು ತೆಗೆದುಕೊಂಡು ದೇಶದಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ.
ಕೇಂದ್ರ ಸರಕಾರ ಬಂದು ೮ ವರ್ಷ ಮತ್ತು ರಾಜ್ಯದಲ್ಲಿ ೩ ವರ್ಷ ಆಯಿತು, ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುತ್ತಾರೆ ಆದರೆ ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಮೋದಿ ಅವರ ಬಗ್ಗೆ ಗೌರವ ಇದೆ, ಅವರು ದೇಶದ ಪ್ರಧಾನಿಯಾಗಿದ್ದಾರೆ, ಆದರೆ ಅವರು ಇಂಧನದ ಬೆಲೆ ಏರಿಕೆಯ ಬಗ್ಗೆ ಮಾತನಾಡುತ್ತಿಲ್ಲ, ೬೩ ಡಾಲರ್ ಗೆ ಕಳೆದ ೮ ವರ್ಷದಿಂದ ಖರೀದಿ ಮಾಡುತ್ತಿದ್ದಾರೆ ಆದರೆ ಜನರಿಗೆ ೧೦೦ ರೂ. ಗೂ ಹೆಚ್ಚಿನ ಬೆಲೆಗೆ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ, ಅದೇ ಮನಮೋಹನ್ ಸಿಂಗ್ ಅವರು ಹೆಚ್ಚಿನ ಬೆಲೆಗೆ ಖರೀದಿಸಿ ಜನರಿಗೆ ಕಡಿಮೆ ದರಕ್ಕೆ ಕೊಟ್ಟು ಜನರ ರಕ್ಷಣೆ ಮಾಡುತ್ತಿದ್ದರು. ಕೇಂದ್ರ ಸರಕಾರ ಇಂಧನಕ್ಕೆ ಸಬ್ಸಿಡಿ ಕೊಡುತ್ತಿಲ್ಲ, ಯಾವ ಬೆಲೆ ಏರಿಕೆಯ ಹೆಸರಲ್ಲಿ ಅಧಿಕಾರಕ್ಕೆ ಬಂದರೋ ಅದೇ ಬೆಲೆ ಏರಿಕೆ ಕಾರಣಕ್ಕೆ ಅವರು ಈಗ ಕೆಳಗೆ ಇಳಿಯಬೇಕು ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಬೇಕಿರುವದು ನಮ್ಮನ್ನು ಮಂತ್ರಿ ಶಾಸಕರನ್ನ ಮಾಡಲು ಅಲ್ಲ ಬದಲಾಗಿ ದೇಶವನ್ನು ರಕ್ಷಣೆ ಮಾಡಲು. ಸಾಮಾಜಿಕ ಜಾಲತಾಣ ಬಹಳ ಕ್ರಿಯಾಶೀಲವಾಗಿದೆ, ಅದರ ಪ್ರಯೋಜನ ಪಡೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂತು, ಈಗ ನಾವು ಅದರ ಪ್ರಯೋಜನ ಪಡೆದುಕೊಳ್ಳಬೇಕು. ದೇಶವನ್ನು ೬೫೦ ಸಂಸ್ಥಾನಗಳು ನಮ್ಮನ್ನು ಆಳಿದ್ದಾರೆ, ನಮ್ಮ ಭಾಗದ ನಿಜಾಮರ ಆಳ್ವಿಕೆಯಿಂದ ನಾವು ಬಹಳ ಹಿಂದೆ ಉಳಿದಿವರ, ನಂತರ ನಮ್ಮನ್ನು ಆಳಿದ ಡಚ್ಚರು, ಫ್ರೆಂಚರು, ಬ್ರಿಟೀಷರು ಸಹ ನಮಗೆ ಅನ್ಯಾಯ ಮಾಡಿದರು. ಕಾಂಗ್ರೆಸ್ ಜನ ಸಾಮಾನ್ಯರ ಪಕ್ಷ. ದೇಶದಲ್ಲಿ ದೊಡ್ಡ ದೊಡ್ಡ ಹೋರಾಟ ನಡೆದ ಒಂದು ಶತಮಾನದ ಹೋರಾಟದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕರು, ಆದರೆ ಭಾರತವನ್ನು ಒಡೆದಿದ್ದು ಬ್ರಿಟೀಷರು. ದೇಶದ ಎಲ್ಲಾ ಆಣೆಕಟ್ಟುಗಳನ್ನು ಕಟ್ಟಿದ್ದು ಕಾಂಗ್ರೆಸ್. ಹೊಸ ಜನರಿಗೆ ಪಕ್ಷದ ಕೆಲಸ, ಸಾಧನೆ, ಸೇವೆ ಗೊತ್ತಿಲ್ಲ ಅದನ್ನು ತಿಳಿಸಿಕೊಡಬೇಕು.
ಎಐಸಿಸಿ ಕಾರ್ಯದರ್ಶಿ ರಾಜನ್, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ಮಾತನಾಡಿದರು.
ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಮಾತನಾಡಿ, ಕಾಂಗ್ರೆಸ್ ಗೆ ಡಿಕೆಶಿ ಅವರುಬಂದ ಮೇಲೆ ಸಿದ್ದರಾಮಯ್ಯನವರ ಸಲಹೆ ಮೇರೆಗೆ ಹೊಸತನ ತರುವ ಕೆಲಸ ಮಾಡಲಾಗುತ್ತಿದೆ, ನಾವು ಇಲ್ಲಿ ಯೋಚನೆ ಮಾಡುವ ಸಂಗತಿಗಳನ್ನು ಪ್ರತಿ ಗ್ರಾಮದ ಪ್ರತಿ ಕಟಟೆಯಲ್ಲಿ ಕುಳಿತು ಜನರಿಗೆ ತಿಳಿ ಹೇಳಬೇಕಿದೆ. ಜಿಲ್ಲೆಗೆ ನಾವು ತಂದ ಕೆಲಸಗಳನ್ನು ಮತ್ತು ಕಳೆದ ಮೂರು ವರ್ಷದಲ್ಲಿ ಬಿಜೆಪಿ ಮಾಡಿದ ಕೆಲಸಗಳನ್ನು ನೇರವಾಗಿ ಮಾತನಾಡೋಣ, ನಾವು ಮಾತನಾಡಲು ಮುಕ್ತವಾಗಿದ್ದೇವೆ, ನಾವು ಕೆಲಸಗಳ ಆದಾರದ ಮೇಲೆ ಮತ ಕೇಳಿದರೆ ಬಿಜೆಪಿ ಕೇವಲ ಜಗಳದ ಮಾತುಗಳಿಂದ ಮತ ಕೇಳುತ್ತಿವೆ. ಮೋದಿ ಅಂತೂ ಕೇವಲ ಸುಳ್ಳುಗಳ ಮೂಲಕ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ತುಂಗಭದ್ರಾ ನದಿಗೆ ಸಾವಿರ ಕೋಟಿ ಅನುದಾನ ಕೊಡುವ ಭರವಸೆ, ಯುವಕರಿಗೆ ಕೊಡಬೇಕಿರುವ ೧೬ ಕೋಟಿ ಉದ್ಯೋಗ ಎಲ್ಲಿವೆ ಎಂಬುದನ್ನು ಹೇಳಬೇಕು, ಭಾಜಪ ಅಂದರೆ ಕೇವಲ ಭಾಷಣ ಮಾತ್ರ. ನಮ್ಮ ಪಕ್ಷದ ಪ್ರತಿ ಕಾರ್ಯಕರ್ತ ತಯಾರಿ ಮಾಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ್, ರಾಜ್ಯ ಪದಾಧಿಕಾರಿಗಳಾದ ಜಾಕಿರ್ ಹುಸೇನ್ ಕಿಲ್ಲೆದಾರ, ಕಿಶೋರಿ ಬೂದನೂರ, ಶೈಲಜಾ ಹಿರೇಮಠ, ಭಾತತಿ ನೀರಗೇರಿ, ಜಿಲ್ಲಾ ಘಟಕದ ಅಧ್ಯಕ್ಷರುಗಳಾದ ಗಾಳೆಪ್ಪ ಪೂಜಾರ, ಸಲೀಂ ಅಳವಂಡಿ, ಟಿ. ರತ್ನಾಕರ, ಗವಿಸಿದ್ದನಗೌಡ ಪಾಟೀಲ್, ಲಿಂಗರಾಜ ಕಾಳೆ, ಎಂ. ಆರ್. ವೆಂಕಟೇಶ, ರುದ್ರೇಶ ಡ್ಯಾಗಿ, ಸುಧೀಂದ್ರ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಲಾದ ಕೆ. ರಾಜಶೇಖರ ಹಿಟ್ನಾಳ ಮತ್ತು ಕೃಷ್ಣಾ ಇಟ್ಟಂಗಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಕಾರ್ಯದರ್ಶಿ ವಿಶಾಲಾಕ್ಷಿ ತಾವರಗೇರಿ, ರವಿ ಕುರಗೋಡ, ಅಕ್ಬರ ಪಾಶಾ, ಮುತ್ತುರಾಜ ಕುಷ್ಟಗಿ, ಅಜೀಂ ಅತ್ತರ್, ಗುರುರಾಜ ಹಲಗೇರಿ ಇತರರು ಇದ್ದರು. ಗ್ರಾಮೀಣ ಬ್ಲಾಕ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಿಬಿ ನಿರೂಪಿಸಿದರು, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ ವಂದಿಸಿದರು.

Please follow and like us: