ಜೀವನಾಡಿ ತುಂಗಭದ್ರ ಪಾಕ್ಷಿಕ ಪತ್ರಿಕೆ,ವೆಬ್ ಸೈಟ್ ಲೋಕಾರ್ಪಣೆ

ವೆಂಕಟೇಶ ಎಂ.ಆರ್. ಸಾರಥ್ಯದ ಜೀವನಾಡಿ ತುಂಗಭದ್ರ ಪಾಕ್ಷಿಕ ಪತ್ರಿಕೆ ಬಿಡುಗಡೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ ಯನ್ನು ಹುಲಿಗಿ-ಹೊಸಹಳ್ಳಿಯ ವನ್ನೂರಮಟ್ಟಿ ಗ್ರಾಮದ ಬಹುಗ್ರಾಮ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ KPCC ಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ ಮಾತನಾಡಿದ “ರಾಜಕಾರಣಿಗಳಾಗಲಿ ಅಧಿಕಾರಿಗಳಾಗಲಿ ತಪ್ಪು ಮಾಡಿದಾಗ ನಿಷ್ಪಕ್ಷಪಾತ ಹಾಗೂ ನಿಷ್ಟೂರ ವರದಿಯ ಪತ್ರಕರ್ತರು ನೀಡಬೇಕು, ಆಗಲೇ ಅವರಿಗೆ ಅವರ ಪತ್ರಿಕೆಗೆ ಬೆಲೆ ಬರೋದು ಇಂತಹ ವ್ಯಕ್ತಿತ್ವ ರೂಪಿಸಿಕೊಂಡಿರುವ ವೆಂಕಟೇಶ ಎಂ.ಆರ್. ಈ ನಿಟ್ಟಿನಲ್ಲಿ ತಮ್ಮ ಪತ್ರಿಕೆಯ ಬಳಗವನ್ನು ಕರೆದೊಯ್ಯುತ್ತಾರೆ ಎಂಬ ನಂಬಿಕೆ ನನಗಿದೆ. ಹೋರಾಟಗಾರ ವೆಂಕಟೇಶ ಎಂ. ಆರ್. ಕಾರ್ಮಿಕರ ಪರ, ರೈತರ ಪರ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ” ಎಂದರು.
ಜೀವನಾಡಿ ತುಂಗಭದ್ರ ಪಾಕ್ಷಿಕ ಪತ್ರಿಕೆಯ ಬಿಡುಗಡೆ ಮಾಡಿ ಮಾತನಾಡಿದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ “ತುಂಗಭದ್ರ ಜಲಾಶಯ, ನದಿ, ಕಾಲುವೆ, ಅಚ್ಚುಕಟ್ಟು ಕುರಿತು ವೆಂಕಟೇಶ ಎಂ.ಆರ್. ಅತ್ಯುತ್ತಮ ಪುಸ್ತಕ ಬರೆದಿದ್ದಾರೆ. ಇವರು ಹೋರಾಟಗಾರರಾದರೂ, ಒಳ್ಳೆಯ ಬರವಣಿಗೆ ಇದೆ. ಇವರು ಪತ್ರಿಕೆ ಮಾಡುತ್ತಿರುವುದು ಶ್ಲಾಘನೀಯ ಇವರಿಗೆ ನನ್ನ ಎಲ್ಲಾ ಸಹಕಾರ ಇದೆ” ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿದ್ದರಾಮಯ್ಯ.ಲೋಕೇಶ್ ಮಾತನಾಡಿ ” ವೆಂಕಟೇಶ ಎಂ.ಆರ್. ಕಾಸಿಗಿಂತ ಪತ್ರಿಕೆಯ ರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ. ಅವರ ಪತ್ರಿಕೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಯಲೆ” ಎಂದರು.
ವೆಂಕಟೇಶ ಎಂ. ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ” ಸುಮಾರು 69,500 ಚದರ ಕಿ.ಮಿ. ವ್ಯಾಪ್ತಿಯನ್ನು ಹೊಂದಿರುವ ತುಂಗಭದ್ರ ನದಿ ,7.5 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. 30 ಲಕ್ಷಕ್ಕೂ ಅಧಿಕ ಜನ ತುಂಗಭದ್ರೆಯ ಫಲಾನುಭವಿಗಳಾಗಿದ್ದಾರೆ. ಕರ್ನಾಟಕದ ಚಿಕ್ಕ ಮಂಗಳೂರು,ಶಿವಮೊಗ್ಗ, ದಾವಣಗೆರೆ,ಹಾವೇರಿ,ಗದಗ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಆಂಧ್ರಪ್ರದೇಶದ ಕರ್ನೂಲ್,ಕಡಪ, ಅನಂತಪುರ, ಆದೋನಿ ಜಿಲ್ಲೆಗಳ ಜೀವನಾಡಿಯಾಗಿದೆ. ಈ ಭಾಗದ ಜನರ ಜೀವನಾಡಿ ತುಂಗಭದ್ರೆಯ ಹೆಸರನ್ನೇ ನನ್ನ ಪಾಕ್ಷಿಕ ಪತ್ರಿಕೆಗೆ ಇಡಲಾಗಿದೆ” ಎಂದರು.
ಜಿ.ಎಸ್.ಗೋನಾಳ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮತ್ತು ವೆಂಕಟೇಶ ಎಂ.ಆರ್. ಇವರನ್ನು ಸನ್ಮಾನ ಮಾಡಿದರು.
ಭಾವೈಕ್ಯ ಪತ್ರಿಕೆಯ ಸಂಪಾದಕ ಸಿ.ವೆಂಕಟೇಶ ಮತ್ತು JCS & SCS ಗುಂಪು ವೆಂಕಟೇಶ ಎಂ.ಆರ್. ಇವರನ್ನು ಸನ್ಮಾನ ಮಾಡಿತು.
ಜೀವನಾಡಿ ತುಂಗಭದ್ರ ಪಾಕ್ಷಿಕ ಪತ್ರಿಕೆಯ ಬಳಗ ಅತಿಥಿಗಳು ಮತ್ತು ಬಂದಂತಹವರಿಗೆಲ್ಲರಿಗೆ ತುಂಗಭದ್ರ ಜಲಾಶಯದ ಚಿತ್ರಣವಿರುವ ನೆನಪಿನ ಕಾಣಿಕೆ ನೀಡಿದರು.
ಆರಂಭದಲ್ಲಿ ಮಾಧುರಿ ರಾಜೇಶ್ ಪ್ರಾರ್ಥನಾ ಗೀತೆ ಹಾಡಿದರು. ವೀರಭದ್ರಯ್ಯ ಭೂಸನೂರಮಠ ಸ್ವಾಗತಿಸಿದರು
ಎಚ್.ಎಸ್.ಹೊನ್ನುಂಚಿ ನಿರೂಪಿಸಿದರು. ರವಿ ವಂದಿಸಿದರು. ಹೊಸಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮನೊರಮ್ಮ, ವಿಜಯನಗರ ಜಿಲ್ಲೆಯ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಭಾ.ಕಾ.ಪ.ಒ.ದ ಕಾರ್ಯಕಾರಿ ಸದಸ್ಯ ವಿ.ಆರ್.ತಾಳಿಕೋಟೆ, ಕ.ಕಾ.ನಿ.ಪ.ಸಂ.ದ ರಾಜ್ಯ ಸಮಿತಿಯ ಸದಸ್ಯರಾದ ಎಂ.ಸಾದಿಕ್ ಅಲಿ, ಎಚ್.ಎಸ್.ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ, ಹಿರಿಯ ಪತ್ರಕರ್ತರಾದ ನಿಂಗಜ್ಜ, ಸಿರಾಜ್ ಬಿಸರಳ್ಳಿ, ಎಚ್.ವಿ‌ ರಾಜಾಭಕ್ಷಿ, ಅಮರಗುಂಡಪ್ಪ ಕಾರಟಗಿ, ವಿ.ಎಸ್.ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ರಾಜ್, ಸುದರ್ಶನ ವರ್ಮ , ಜೀವನಾಡಿ ತುಂಗಭದ್ರ ಪಾಕ್ಷಿಕ ಪತ್ರಿಕೆಯ ಬಳಗದವರಾದ ಗೌರವ ಸಂಪಾದಕ ಜೆ. ಭಾರಧ್ವಜ್, ವ್ಯವಸ್ಥಾಪಕ ಸಂಪಾದಕ ಎಂ.ಆರ್. ಮೋಹನ್, ಸಹ ಸಂಪಾದಕ ವೆಂಕಟೇಶ ಸುಗ್ಗೇನಹಳ್ಳಿ, ಪತ್ರಿಕೆಯ ಪುಟ ವಿನ್ಯಾಸಕ ವರದಿಗಾರ ರಾಜಾರಾಮ್ ಪವಾರ್, ವರದಿಗಾರ ರಾಜೇಶ್ ಎಂ.ವಿ. ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Please follow and like us: