ಸನ್ಮಾನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ:ಬೀರಪ್ಪ ಅಂಡಗಿ


ಕೊಪ್ಪಳ:ಸನ್ಮಾನದಿಂದ ನನ್ನ ಜವಾಬ್ದಾರಿಯು ಹೆಚ್ಚಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಕರುನಾಡು ಸಾಧಕರು ಪ್ರಶಸ್ತಿಯು ಲಭಿಸಿದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,ಸನ್ಮಾನ ಎಂಬ ಕಾರ್ಯಕ್ರಮದಿಂದ ನನ್ನ ಕಾರ್ಯ ಕ್ಷೇತ್ರದಲ್ಲಿನ ಜವಾಬ್ದಾರಿಯು ಹೆಚ್ಚಾಗಿದೆ ಅಲ್ಲದೇ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ವಿಕಲಚೇತನರ ಕ್ಷೇತ್ರದಲ್ಲಿ ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಆ ಕ್ಷೇತ್ರದಲ್ಲಿ ಇನ್ನು ಹೆಚ್ಚು ಹೆಚ್ಚು ಕೆಲಸ ಮಾಡಲು ಅನುಕೂಲವಾಗಲಿದೆ.ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯು ಮಾಡುವ ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಪ್ರತಿಯೊಬ್ಬರಿಂದ ಆದಾಗ ಮಾತ್ರ ಆ ವ್ಯಕ್ತಿ ತಾನು ಮಾಡಿದ ಸಾಧನೆಯ ಕ್ಷೇತ್ರ ಹೆಚ್ಚು ಸಾಧನೆ ಮಾಡಲು ಪ್ರೇರಣೆ ನೀಡಿದಂತೆ ಆಗುತ್ತದೆ.ಯಾವುದೇ ಹುದ್ದೆಯಲ್ಲಿ ಇರುವಾಗ ಮಾಡಿದ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ.ಮಾಡುವ ಕೆಲಸದ ಬಗ್ಗೆ ಹೆಚ್ಚು ಶ್ರದ್ದೆಯನ್ನು ವಹಿಸುವುದರ ಜೊತೆಗೆ ಶ್ರಮ ಹಾಕಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಶಾಲೆಯ ಟಿ.ಜಿ.ಟಿ.ಶಿಕ್ಷಕರಾದ ಮೊಹಮ್ಮದ ಆಭೀದ ಹುಸೇನ ಅತ್ತಾರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ್ ಹುಸೇನ ಮಾತನಾಡಿ,ಪ್ರಸ್ತುತ ದಿನಮಾನಗಳಲ್ಲಿ ಪ್ರಶಸ್ತಿ ನೀಡುವ ವಿಧಾನದಲ್ಲಿನ ಬದಲಾವಣೆಯಿಂದ ಪ್ರಶಸ್ತಿಯ ಮೌಲ್ಯ ಕೂಡಾ ಕಡಿಮೆಯಾಗಿದೆ.ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿ ಮಾಡಿದ ಸಾಧನೆಯನ್ನು ಗುರುತಿಸಿ ಅರ್ಜಿಯನ್ನು ಕರೆಯದೆ ನೇರವಾಗಿ ಆಯ್ಕೆ ಮಾಡಿ ಅಂತಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡವಂತಾದಾಗ ಮಾತ್ರ ಪ್ರಶಸ್ತಿಗೆ ಮೌಲ್ಯ ಬರಲು ಸಾಧ್ಯವಾಗುತ್ತದೆ.ಬೀರಪ್ಪ ಅಂಡಗಿ ಅವರು ಕೂಡಾ ಸುಮಾರು ೧೫ ವರ್ಷಗಳ ಕಾಲ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು,ಅಂತವರನ್ನು ಗುರತಿಸಿ ಪ್ರಶಸ್ತಿ ನೀಡಿದ್ದು ಕೂಡಾ ಉತ್ತಮ ಕಾರ್ಯವಾಗಿದೆ.ಇನ್ನೂ ಹೆಚ್ಚಿನ ರೀತಿಯಲ್ಲಿ ವಿಕಲಚೇತನರ ಸೇವೆಯನ್ನು ಮಾಡಲಿ ಎಂದು ಹೇಳಿದರು.
ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡುತ್ತಾ,ಪ್ರತಿಯೊಬ್ಬ ವ್ಯಕ್ತಿಯು ತಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲಿ ನಿಸ್ವಾರ್ಥ ರೀತಿಯಲ್ಲಿ ಸೇವೆಯನ್ನು ಮಾಡಬೇಕು.ಅಂದಾಗ ಪ್ರಶಸ್ತಿಯಂತ ಅನೇಕ ಗೌರವಗಳು ತಾವಾಗಿಯೇ ಬರಲಿವೆ.ಪ್ರಶಸ್ತಿಗಳ ಹಿಂದೆ ನಾವು ಹೋಗಬಾರದು ಉತ್ತಮ ಕಾರ್ಯಗಳನ್ನು ಮಾಡಿದರೆ ಪ್ರಶಸ್ತಿಗಳು ನಮ್ಮ ಹಿಂದೆ ಬರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಶಿಕ್ಷಕರಾದ ನಾಗಪ್ಪ ನರಿ,ಶ್ರೀನಿವಾಸರಾವ ಕುಲಕರ್ಣಿ,ಜಯಶ್ರೀ ದೇಸಾಯಿ,ಶೀಲಾ ಬಂಡಿ,ಸುನಂದಬಾಯಿ,ಶಂಕ್ರಮ್ಮ ಶೆಟ್ಟರ್,ಭಾರತಿ ಆಡೂರು,ಗೌಸಿಯಾಬೇಗಂ,ಗಂಗಮ್ಮ ತೋಟದ,ರತ್ನಾ ಹೂಲಗೇರಿ,ನಾಗರತ್ನ ಆಡೂರು,ಕಲಿಕೆ ಟಾಟಾ ಟ್ರಸ್ಟ್ ನ ಪ್ರೇರಕಿ ಅನಿತಾ ಉಪ್ಪಾರ,ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶ್ರೀನಿವಾಸ ಬಡಿಗೇರ,ಮುಖಂಡರಾದ ಮಾರುತಿ ಆಪ್ಟೆ ಮುಂತಾದವರು ಹಾಜರಿದ್ದರು.
ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ,ಶ್ರೀನಿವಾಸರಾವ ಕುಲಕರ್ಣಿ ವಂದಿಸಿದರು.

Please follow and like us: