ಕೊಪ್ಪಳ ಸರ್ವೆ ಇಲಾಖೆಯ ಪರವಾನಗಿ ಭೂಮಾಪಕ ಎಸಿಬಿ ಬಲೆಗೆ

ಕೊಪ್ಪಳ ಸರ್ವೆ ಇಲಾಖೆಯ  ಭೂಮಾಪಕ ರುದ್ರೇಶ್ ಲಂಚ ಪಡೆಯುವಾಗ ಎಸಿಬಿ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ   ಹನುಮಪ್ಪ ತಂದೆ ಸುಭಾಸಪ್ಪ ಮ್ಯಾದನೇರಿ ಇವರು ತಮ್ಮ ಜಮೀನನ್ನು ಪಾಲುವಾಟ್ನಿ ಮಾಡಿ, ಸ್ಕೆಚ್ ಮಾಡಿ, 11ಇ ನೀಡಲು ADLR ಆಫೀಸ್ ಕೊಪ್ಪಳದಲ್ಲಿ ಅರ್ಜಿ ನೀಡಿದ್ದು ಸರ್ವೇ ಕಛೇರಿಯ ಪರವಾನಗಿ ಭೂಮಾಪಕರಾದ   ರುದ್ರೇಶ್ ಇವರು ಅರ್ಜಿದಾರರ ಕೆಲಸ ಮಾಡಿಕೊಡಲು 20 ರಿಂದ 25 ಸಾವಿರ ರೂಪಾಯಿವರೆಗೂ ಖರ್ಚಾಗುತ್ತದೆ ಅಂತಾ ಹೇಳಿ ಅಡ್ವಾನ್ಸ್ ಆಗಿ ಅರ್ಜಿದಾರರಿಂದ 16000/- ರೂ ಹಣವನ್ನು ಸ್ವೀಕರಿಸಿ ಬಾಕಿ 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಇದರಿಂದ ಬೇಸತ್ತ ಅರ್ಜಿದಾರರು ಕೊಪ್ಪಳದ ಎಸಿಬಿ ಠಾಣೆಗೆ ದಿನಾಂಕ 23/06/2022 ರಂದು ಬಂದು ಈ ಬಗ್ಗೆ ದೂರು ನೀಡಿರುತ್ತಾರೆ. ಪ್ರಕರಣವನ್ನು ದಾಖಲಿಸಿಕೊಂಡ ಎಸಿಬಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು ಆರೋಪಿ ಪರವಾನಗಿ ಭೂಮಾಪಕ  ರುದ್ರೇಶ್ ಇವರು ಇಂದು ಮುಂಜಾನೆ 9;25 ಗಂಟೆ ಸುಮಾರಿಗೆ ಕೊಪ್ಪಳದ ಬಸವೇಶ್ವರ ಸರ್ಕಲ್ ದಲ್ಲಿ ಬಂದು ಫಿರ್ಯಾದಿಯವರಿಂದ ತಾವು ಕೇಳಿದ್ದ 5000/- ರೂ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಳ್ಳಾರಿ ಎಸಿಬಿ SP ಶ್ರೀಹರಿಬಾಬು ರವರ ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಠಾಣೆಯ DSP   ಶಿವಕುಮಾರ್ MC ರವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಇನ್ಸಪೆಕ್ಟರ್ ಗಳಾದ   ಶಿವರಾಜ್ ಇಂಗಳೆ, ಆಂಜನೇಯ ಡಿಎಸ್. ಹಾಗು ಸಿಬ್ಬಂದಿಗಳಾದ   ಸಿದ್ದಯ್ಯ, ರಂಗನಾಥ, ಗಣೇಶ್, ಜಗದೀಶ್, ಉಮೇಶ್, ಶ್ರೀಮತಿ ಸವಿತಾ, ಹಾಗು ಚಾಲಕರಾದ ಆನಂದ ಮತ್ತು ಬಸಪ್ಪ ರವರು ಭಾಗವಹಿಸಿದ್ದರು

Please follow and like us: