ಶಾಲೆ ಜೀವಂತ ದೇವರುಗಳ ದೇವಾಲಯ-ಬಯ್ಯಾಪೂರ

ಕುಷ್ಟಗಿ : ಶಾಲೆ ಜೀವಂತ ದೇವರುಗಳ ದೇವಾಲಯ .ನಮ್ಮೋರಿನ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಸವ೯ರೀತಿಯ ಸಹಾಯ ಸಹಕಾರ ನೀಡಲು ಸನ್ನದ್ಧರಾಗಬೇಕು ಸಮುದಾಯದ ಸಹಕಾರದಿಂದ ಶಾಲೆಗಳ ಅಭಿವೃದ್ಧಿ ಸಾಧ್ಯವಿದೆ , ಸವ೯ಜನಾಂಗದ ಶಾಂತಿಯ ತೋಟದಂತಿರುವ ಶಾಲೆಯು ಸರ್ವಾಂಗೀಣ ಅಭಿವೃದ್ಧಿಯನ್ನು ಸರ್ವರ ಸಹಕಾರದಿಂದ ಸಾಧಿಸಬೇಕಾಗಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಗುಡದೂರುಕಲ್ಲ ಶಾಲೆಯ 4 ನೂತನ ಕೊಠಡಿಗಳು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು

ಮಕ್ಕಳನ್ನು ಈ ರಾಷ್ಟ್ರದ ಸತ್ಪರಜೇಗಳನ್ನಾಗಿ ರೂಪಿಸಿ ಮಕ್ಕಳನ್ನು ದೇಶದ ಕ್ರೀಯಾಶೀಲಾ ಸಂಪನ್ಮೂಲವನ್ನಾಗಿ ರೂಪಿಸಬೇಕಾಗಿದೆ , ಆ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಸ್ತಿ ಬೇಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಸಮಾಜದ ಈ ದೇಶದ ಉತ್ತಮ ಆಸ್ತಿಯನ್ನಾಗಿ ಮಾಡಿ ಎಂದರು

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸುರೇಂದ್ರ ಕಾಂಬಳೆ ಅವರು ಮಾತನಾಡಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಅಭಿವೃದ್ಧಿಗೆ ಇಲಾಖೆಯವತ್ತಿಂದ ಸವ೯ ರೀತಿಯ ಸಹಕಾರ ನೀಡಲಾಗುವುದು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸನ್ನದ್ಧರಾಗಿ ಎಂದು ಕರೆ ನೀಡಿದರು ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನ್ ಸಾಬ್ ವಾಲಿಕಾರ್. ಶಿಕ್ಷಣ ಸಂಯೋಜಕರಾದ ಶಿವಾನಂದ ಪಂಪಣ್ಣನವರ, Crp ಹನುಮಂತಪ್ಪ ಗೋಡೆಕಾರ , ಗ್ರಾಮಸ್ಥರಾದ ನಾಗಪ್ಪ ಹರಿಜನ , ಅಡಿವೆಪ್ಪ , ಶಾಲಾ ಮುಖ್ಯೋಪಾಧ್ಯಾಯರು ಸಹಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು,

Please follow and like us: