ಹಿರಿಯ ಪತ್ರಕರ್ತ ಸಂತೋಷ್ ಪಾಟೀಲ್ ಚಿಕಿತ್ಸೆಗೆ ೩ ಲಕ್ಷ ರೂ ಮಂಜೂರು ಮಾಡಿದ ಸಿಎಂ

ಹಿರಿಯ ಪತ್ರಕರ್ತ ಸಂತೋಷ್ ಪಾಟೀಲ್ ಅವರ ಚಿಕಿತ್ಸೆಗೆ ಮೂರು ಲಕ್ಷ ರೂ ಮಂಜೂರು ಮಾಡಿದ

ಸಿಎಂ ಬೊಮ್ಮಾಯಿ

ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘ(k.u.w.j) ದ ಮನವಿ ಮೇರೆಗೆ ಹಿರಿಯ ಪತ್ರಕರ್ತ ಸಂತೋಷ್ ಪಾಟೀಲ್ ಅವರ ಚಿಕಿತ್ಸೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 3 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.

ಸಂತೋಷ್ ಪಾಟೀಲ್ (ಬೆಳಗಾವಿ ಮೂಲ)ಅವರು ದಿಡೀರನೆ ಬಿದ್ದು ಮೆದುಳಿನ ರಕ್ತಸ್ರಾವ ದಿಂದ ಆಸ್ಪತ್ರೆಗೆ ದಾಖಲಾಗಿದ್ದು ಈಗಾಗಲೇ 2.75 ಲಕ್ಷ ರೂ ವೆಚ್ಚವಾಗಿದ್ದು ಒಟ್ಟು ಚಿಕಿತ್ಸೆಗಾಗಿ 5 ಲಕ್ಷ ರೂ ಗಳ ಅಗತ್ಯ ಇರುವುದಾಗಿ ಇರುವ ಮನವಿಯನ್ನು ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ ಜಿ.ಕೆ ಸತ್ಯ ಅವರು ರಾಜ್ಯ ಸಂಘದ ಗಮನಕ್ಕೆ ತಂದು, ಮನವಿ ಪತ್ರ ಕಳುಹಿಸಿದ್ದರು.

ರಾಜ್ಯ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರ ಮನವಿ ಮೇರೆಗೆ ಪರಿಹಾರ ಮಂಜೂರು ಮಾಡಿದ ಮುಖ್ಯ ಮಂತ್ರಿಗಳು ಪರಿಹಾರ ಮಂಜೂರು ಮಾಡಿದ್ದಾರೆ.

ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರೊಂದಿಗೆ
ಸಂಘದ ಮಾಜಿ ಅಧ್ಯಕ್ಷ ಜಿ.ಕೆ ಸತ್ಯ, ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ, ಉಪಾಧ್ಯಕ್ಷ ಪುಂಡಲೀಕ ಬಾಳೋಜಿ,ರಾಜ್ಯ ಸಮಿತಿ ಸದಸ್ಯರಾದ ವಾಸುದೇವ ಹೊಳ್ಳ ಎಂ, ದೇವರಾಜ್ ಜೊತೆಗಿದ್ದರು.

ಪರಿಹಾರ ಮಂಜೂರು ಮಾಡಿ ಸಹಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೃತಜ್ಞತೆ ಸಲ್ಲಿಸಿದೆ.

Please follow and like us: