ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ : ಅರ್ಜಿ ಆಹ್ವಾನ

: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಕೊಪ್ಪಳ ವತಿಯಿಂದ 2022-23ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2022-23ನೇ ಸಾಲಿಗೆ ಮತಿಯ ಅಲ್ಪಸಂಖ್ಯಾತರಾದ  ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಭೌದ್ಧರು, ಸಿಖ್ಖರು ಮತ್ತು ಫಾರ್ಸಿ ಸಮುದಾಯದವರಿಗೆ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರುವ, ವಾರ್ಷಿಕ ಗ್ರಾಮೀಣ ಪ್ರದೇಶದವರಿಗೆ 81.000, ನಗರ ಪ್ರದೇಶದವರಿಗೆ ರೂ. 1,03,000  ವರಮಾನದ ಒಳಗಿರುವ 18 ರಿಂದ 55 ವರ್ಷ ಹಾಗೂ ಹೊಸ ಯೋಜನೆಗಳಿಗೆ 18 ರಿಂದ 45 ವರ್ಷ ವಯೋಮಿತಿವುಳ್ಳ ಆಸಕ್ತರು ಈ ಯೋಜನೆಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಶ್ರಮಶಕ್ತಿ ಸಾಲ ಯೋಜನೆ  ;
ಶ್ರಮಶಕ್ತಿ ಸಾಲ ಯೋಜನೆಯಲ್ಲಿ ಸಾಂಪ್ರದಾಯಿಕ ಕುಶಲ ಕರ್ಮಿಗಳು ಹಾಗೂ ವೃತ್ತಿ ಕುಲಕಸಬುದಾರರು, ತಮ್ಮ ಸಾಂಪ್ರದಾಯಕ ಮಾರುಕಟ್ಟೆ ಹಾಗೂ ವೃತ್ತಿ ಕೌಶಲ್ಯತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ ಶ್ರಮಶಕ್ತಿ ಯೋಜನೆ ಜಾರಿಯಲ್ಲಿದೆ.  ಈ ಯೋಜನೆಯಡಿ ಸಾಂಪ್ರದಾಯಿಕ ಕುಶಲ ಕರ್ಮಿಗಳು ವೃತ್ತಿ ಕುಲಕಸಬುದಾರರಿಗೆ  ಘಟಕ ವೆಚ್ಚ ರೂ. 50,000 ಗಳು ಇತರೆ ವೃತ್ತಿಗಳಿಗೆ ಯೋಜನೆಯ ಲಾಭದಾಯಕತೆ ಮತ್ತು ಆದಾಯಗಳಿಕೆಗೆ ಅನುಗುಣವಾಗಿ ರೂ. 25000 ಕ್ಕೆ ಮೀರದಂತೆ ಸಾಲವನ್ನು ಶೇ. 50 ರಷ್ಟು ಸಾಲವನ್ನು ಬ್ಯಾಕ್ ಆ್ಯಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುವುದು. ಈ ಸಾಲಕ್ಕೆ ಸಾಲಿಯಾನ ಶೇ.4ರ ಬಡ್ಡಿ ದರ ವಿಧಿಸಲಾಗುವುದು 3 ವರ್ಷದ ಅವಧಿಯೊಳಗೆ ಸಾಲ ಮರುಪಾವತಿಸಿದಾಗ ಮಾತ್ರ ಶೇ.50 ರಷ್ಟು ಸಹಾಯಧನವನ್ನು  ಬ್ಯಾಕ್ ಆ್ಯಂಡ್ ಸಬ್ಸಿಡಿಯಾಗಿ ಸಾಲದ ಖಾತಾ ಪುಸ್ತಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.  ತಪ್ಪಿದಲ್ಲಿ ಪೂರ್ಣ ಮೊತ್ತವನ್ನು ಸಾಲವನ್ನಾಗಿ ಪರಿಗಣಿಸಲಾಗುವುದು.
ಸ್ವಯಂ ಉದ್ಯೋಗ ಯೋಜನೆ ;
ಸ್ವಯಂ ಉದ್ಯೋಗ ಯೋಜನೆಯಲ್ಲಿ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಮೂಲಕ ಮತಿಯ ಅಲ್ಪಸಂಖ್ಯಾತರ ಜನರು ಕೈಗೊಳ್ಳುವ ವಿವಿಧ,  ವ್ಯಾಪಾರ, ಉದ್ಯೋಗ, ಸೇವಾ ಉದ್ದಿಮೆಗಳು, ಕೈಗಾರಿಕೆಗಳು ಹಾಗೂ ಕೃಷಿ ಆಧಾರಿತ  ಚಟುವಟಿಕೆಗಳಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ  ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು.  ರೂ. 1 ಲಕ್ಷದೊಳಗೆ ಇರುವ ಯೋಜನೆಗಳಿಗೆ ಶೇ.50 ಅಥವಾ ಗರಿಷ್ಠ ರೂ. 35,000 ಗಳ ಸಹಾಯಧನ ಮತ್ತು 1 ಲಕ್ಷ÷ಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳಿಗೆ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ. 2 ಲಕ್ಷ ಸಹಾಯಧನ ಸೌಲಭ್ಯ ನೀಡಲಾಗುವುದು.
ಹೊಸ ಯೋಜನೆ ;
ಹೊಸ ಯೋಜನೆಯಾದ ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿ ಕಾರ್ಯಕ್ರಮದಡಿ ಟ್ಯಾಕ್ಸಿ, ಸರಕು ಸಾಗಾಣಿವಾಹನ ಖರೀದಿಸಲು ರಾಷ್ಟಿçÃಕೃತ ಬ್ಯಾಂಕುಗಳಿAದ ಪಡೆಯುವ ಸಾಲಕ್ಕೆ ನಿಗಮದಿಂದ ರೂ. 75,000ಗಳ ಸಹಾಯಧನ ಸೌಲಭ್ಯವಿರುತ್ತದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲಿಸಲು ಜುಲೈ 15 ಕೊನೆಯ ದಿನವಾಗಿದ್ದು, ಕೊಪ್ಪಳ ಜಿಲ್ಲೆಯ ಅರ್ಹ ಅಲ್ಪಸಂಖ್ಯಾತರು ನಿಗಮದ ಅಂತರಜಾಲ   https://kmdconline.karnataka.gov.in ದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿಯ ಪ್ರಿಂಟೌಟ್ ಪಡೆದು ಅರ್ಜಿಯಲ್ಲಿ ನಮೊದಿಸಿರುವಂತೆ ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ್, ಓಟರ್ ಐಡಿ, ಪಡಿತರ ಚೀಟಿ, ಜಾತಿ ಮತ್ತು ಆದಾಯ, ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್, 4 ಪಾಸ್ ಪೋರ್ಟ ಅಳತೆ ಭಾವಚಿತ್ರ, ಯೋಜನೆಗಳಿಗೆ ಸಂಬAದಿತ ಮುಂತಾದ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಜುಲೈ 15 ರೊಳಗಾಗಿ ನಿಗಮದ ಕಛೇರಿಗೆ ಖುದ್ದಾಗಿ ಬಂದು ಸಲ್ಲಿಸಬೇಕಾಗಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 08539-2225008 ಕ್ಕೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರು  ತಿಳಿಸದ್ದಾರೆ.