ಕೊಪ್ಪಳ ಮಾವು ಮಾರಾಟ ಮೇಳ ಜೂನ್ 01 ರವರೆಗೆ ಮುಂದುವರಿಕೆ


: ಕೊಪ್ಪಳ ನಗರದ ಎಲ್.ಐ.ಸಿ ಆಫೀಸ್ ಎದುರುಗಡೆಯ ತೋಟಗಾರಿಕೆ ಕಚೇರಿ ಆವರಣದಲ್ಲಿ ಏರ್ಪಡಿಸಲಾದ ಮಾವು ಮಾರಾಟ ಮೇಳವನ್ನು ಜೂನ್ 01 ರವರೆಗೆ ಮುಂದುವರಿಸಲಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ್ ಅವರು ತಿಳಿಸಿದ್ದಾರೆ.
ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಮತ್ತು ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ರೈತರಿಂದ ನೇರವಾಗಿ ಕೊಂಡುಕೊಳ್ಳುವ ಉದ್ದೇಶದಿಂದ ಮೇ 23 ರಿಂದ 30 ರವರೆಗೆ ಮಾವು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು.  ರೈತರು ಹಾಗೂ ಗ್ರಾಹಕರ ಒತ್ತಾಯದ ಮೇರೆಗೆ ಮಾವು ಮಾರಾಟ ಮೇಳವನ್ನು ಜೂನ್ 01 ರವರೆಗೆ ಮುಂದುವರೆಸಲಾಗಿದ್ದು, ರೈತರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ  ತಿಳಿಸಿದೆ.

ಕೊಪ್ಪಳ ಮಾವುಮೇಳ

Please follow and like us: