ಕಿರು ಉದ್ಯಮ ಸ್ಥಾಪನೆಗಾಗಿ ಸರಕಾರದಿಂದ 1 ಲಕ್ಷ ರೂ ಬೀಜಧನ-ಅಮರೇಗೌಡ ಪಾಟೀಲ್ ಬಯ್ಯಾಪುರ

Kustagi News ತಾಲೂಕು ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಕುಷ್ಟಗಿ, ಹಾಗೂ ಸಂಜೀವಿನಿ -NRLM ಯೋಜನೆಯ ಸಹಯೋಗದಲ್ಲಿ ಅಮೃತ ಯೋಜನೆಯಡಿಯಲ್ಲಿ ಕಿರು ಉದ್ದಿಮೆ ಮಾಡುವ ಸಲುವಾಗಿ ಚೆಕ್ ವಿತರಣೆ ಕಾರ್ಯಕ್ರಮವನ್ನು  ಅಮರೇಗೌಡ ಪಾಟೀಲ್ ಬಯ್ಯಾಪುರ ಶಾಸಕರು ಸಸಿ ಗೆ ನೀರು ಹಾಕುವದರ ಮುಖಾಂತರ ಉದ್ಘಾಟನೆ ಮಾಡಿದರು. ನಂತರ   ಶಾಸಕರು ಮಾತನಾಡಿ ಮುಖ್ಯಮಂತ್ರಿಯವರು 75 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಘೋಷಣೆ ಮಾಡಿದ 13 ಅಮೃತ ಯೋಜನೆಗಳ ಪೈಕಿ ಇದೊಂದಾಗಿದ್ದು ಕಿರು ಉದ್ಯಮ ಸ್ಥಾಪನೆಗಾಗಿ ಸರಕಾರದಿಂದ 1 ಲಕ್ಷ ರೂಗಳನ್ನು ಬೀಜಧನವಾಗಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು. ಸಂಜೀವಿನಿ ಸ್ವ ಸಹಾಯ ಸಂಘಗಳು ಮಾಡುತ್ತಿರುವ ವಿವಿಧ ಜೀವನೋಪಾಯ ಚಟುವಟಿಕೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಅಮೃತ್ ಯೋಜನೆಯಲ್ಲಿ ಆಯ್ಕೆಯಾದ ಗುಂಪುಗಳಿಗೆ ಚೆಕ್ ವಿತರಣೆ ಮಾಡಿದರು.ತಾ.ಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಡಾ //ಜಯರಾಮ್ ಚವಾಣ್ ಸರ್ ಗುಂಪಿನ ಮಹಿಳೆಯರು ಆದಾಯತ್ಪನ್ನ ಚಟುವಟಿಕೆ ಕೈಗೊಂಡು ಕುಟುಂಬದ ನಿರ್ವಹಣೆ ಮಾಡಲು ಪ್ರಮುಖ ಪಾತ್ರ ವಹಿಸಿವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು, ತಾಲ್ಲೂಕ ಸಂಜೀವಿನಿ ವ್ಯವಸ್ಥಾಪಕರು ಮತ್ತು ವಲಯ ಮೇಲ್ವಿಚಾರಕರು, BEC, ಹಾಗೂ 37 ಸಂಜೀವಿನಿ ಸ್ವ ಸಹಾಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು
Please follow and like us: