ಶಾಲಾ ಪ್ರಾರಂಭೋತ್ಸವ ,ಕಲಿಕಾ ಚೇತರಿಕೆ ಕಾರ್ಯಕ್ರಮ-ಗುಲಾಬಿ ಹೂವು ನೀಡುವುದರ ಮೂಲಕ ಸ್ವಾಗತ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರದಾರಗಲ್ಲಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು   ಉಪನಿರ್ದೇಶಕರಾದ  ಮುತ್ತರೆಡ್ಡಿ ರೆಡ್ಡೇರ  ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಸ್ವಾಗತಿಸಿ ಮಕ್ಕಳು ನಿರಂತರವಾಗಿ ಶಾಲೆಗೆ ಬರಬೇಕು ವಿದ್ಯಾಭ್ಯಾಸ ದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರಬೇಕು, ಕ್ರಿಯಾಶೀಲ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು, ಶಿಕ್ಷಕರಿಗೆ ಸಲಹೆ ಸೂಚನೆ ಮಾರ್ಗದರ್ಶನ ಮಾಡಿದರು .

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ   ಶರಣ ಬಸನಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ   ಮಂಜುನಾಥ್ ಬಿ, ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಾರುತಿ ಮ್ಯಾಗಳಮನಿ, ಶಿಕ್ಷಕರಾದ ಬಸವರಾಜ ಹೊಸಮನಿ, ಶ್ರೀಮತಿ ಸುಶೀಲಾ ಬ್ಯಾಹಟ್ಟಿ, ಶ್ರೀಮತಿ ವಿಜಯಲಕ್ಷ್ಮಿ,  ನರಸಿಂಗರಾವ್ ಹಾಗೂ ಮಾನ್ವಿ ಪಾಷಾ ಮಾಜಿ ನಗರಸಭೆ ಸದಸ್ಯರು ಕೊಪ್ಪಳ ಹಾಜರಿದ್ದರು

Please follow and like us: