ಡೊಳ್ಳು ಬಾರಿಸುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು


ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆಯಲ್ಲಿ ರಜೆಯ ಅವಧಿಯ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಡೊಳ್ಳು ಬಾರಿಸುವ ಜೊತೆಗೆ ಪುಷ್ಪ ಹಾಕುವುದರ ಮೂಲಕ ಭರ್ಜರಿಯಾಗಿ ಸ್ವಾಗತಿಸಲಾಯಿತು.
ಸರಕಾರದ ಆದೇಶದಂತೆ ಎರಡು ದಿನಗಳ ಕಾಲ ಶನಿವಾರ ಹಾಗೂ ಭಾನುವಾರ ಶಾಲಾ ಪ್ರಾರಂಭಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು.
ಕಳೆದ ೪೫ ದಿನಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣದ ರೀತಿಯಲ್ಲಿ ತಳಿರು ತೋರಣ,ಬಣ್ಣದ ಹಾಳೆಗಳನ್ನು ಕಟ್ಟುವುದರ ಜೊತೆಯಲ್ಲಿ ರಂಗೋಲಿ ಹಾಕಲಾಗಿತ್ತು.
ಮಕ್ಕಳನ್ನು ಡೊಳ್ಳು ಬಾರಿಸವುದರ ಜೊತೆಗೆ ಮಕ್ಕಳಿಗೆ ಪುಷ್ಪ ಹಾಕುವುದರ ಮೂಲಕ ಸ್ವಾಗತಿಸಿದರು.
ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಶಿಕ್ಷಕರಾದ ಆಬೀದ ಹುಸೇನ ಅತ್ತಾರ,ಭಾರತಿ ಆಡೂರು,ಶೀಲಾ ಬಂಡಿ,ಸುನಂದಾಬಾಯಿ,ಶಂಕ್ರಮ್ಮ ಶೆಟ್ಟರ್,ರತ್ನಾ ಹೂಲಗೇರಿ,ಶ್ರೀನಿವಾಸರಾವ ಕುಲಕರ್ಣಿ,ಗಂಗಮ್ಮ ತೋಟದ,ನಾಗರತ್ನ ಆಡೂರು,ನಾಗಪ್ಪ ನರಿ,ಟಾಟಾ ಕಲಿಕಾ ಟ್ರಸ್ಟ್ ನ ಮೇಲ್ವಿಚಾರಕ ಬಸವರಾಜ,ಪ್ರೇರಕಿ ಅನಿತಾ ಹೂಗಾರ,ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶ್ರೀನಿವಾಸ ಬಡಿಗೇರ ಸೇರಿದಂತೆ ಅನೇಕರು ಹಾಜರಿದ್ದರು.

Please follow and like us: