
ಕನ್ನಡನೆಟ್ NEWS ಶ್ರೀಗಳ ಸತ್ಯಾಗ್ರಹ ಬೆಂಬಲಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಎಸ್ಸಿ / ಎಸ್ಟಿ ಮೀಸಲಾತಿ ಹೆಚ್ಚಿಸಬೇಕು ಎಂದು ಶರಣಪ್ಪ ನಾಯಕ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಕೊಪ್ಪಳ ತಾಲೂಕ ವತಿಯಿಂದ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀಶ್ರೀಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಇಂದಿಗೆ 96 ದಿನಗಳು ಆಗುತ್ತಾ ಬಂದರೂ ರಾಜ್ಯ ಸರಕಾರ ಮೀಸಲಾತಿಗಾಗಿ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವದರಿಂದ ಆಯಾ ತಾಲೂಕ ಜಿಲ್ಲಾ ಕೇಂದ್ರಗಳಲ್ಲಿ 100 ನೇ ದಿನದ ಧರಣಿ ಸತ್ಯಾಗ್ರಹ ಬೆಂಬಲಿಸಿ ಬೃಹತ್ ಪ್ರತಿಭಟನೆ ಮೂಲಕ ಎಸ್ಸಿ / ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ರಾಜ್ಯ ಸರಕಾರಕ್ಕೆ ಚುರುಕು ಮುಟ್ಟಿಸಲು ದಿನಾಂಕ 20-05-2022 ಶುಕ್ರವಾರದಂದು ಕೊಪ್ಪಳ ತಾಲೂಕ ಎಲ್ಲಾ ಗ್ರಾಮಗಳಿಂದ ಎಸ್ಸಿ / ಎಸ್ಟಿ ಸಮುದಾಯದ ಮುಖಂಡರುಗಳು , ಮಹಿಳೆಯರು , ಚುನಾಯಿತ ಪ್ರತಿನಿಧಿಗಳು , ಪ್ರಗತಿಪರ ಸಂಘಟನೆಗಳ ಉತ್ಸಾಹಿಗಳು , ಪ್ರತಿಭಟನಾ ರಾಲಿಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. , ಪ್ರತಿಭಟನೆಯು ಕೊಪ್ಪಳ ನಗರದ ಶ್ರೀ ವಾಲ್ಮೀಕಿ ಭವನ ( ಹಳೇ ಸರಕಾರಿ ಆಸ್ಪತ್ರೆ ಹಿಂದುಗಡೆ ) ದಿಂದ ಪ್ರಾರಂಭವಾಗಿ ಅಶೋಕ ಸರ್ಕಲ್ದಿಂದ ಶ್ರೀ ಬಸವೇಶ್ವರ ಸರ್ಕಲ್ವರೆಗೆ ನಡೆಯಲಿದ್ದು ಅಲ್ಲಿ ನಮ್ಮ ಮನವಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಶ್ರೀಗಳ ಆದೇಶದ ಮೇರೆಗೆ ನಮ್ಮ ಬೇಡಿಕೆಗಳನ್ನು ಓದಿ ಒಪ್ಪಿಸುವ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು ಪತ್ರಿಕಾ ಗೋಷ್ಠಿಯಲ್ಲಿ ಸುರೇಶ ಡೋಣಿ , ಶರಣಪ್ಪ ನಾಯಕ , ಗೀತಾ ಮುತ್ತಾಳ, ಯಮನೂರಪ್ಪ ನಾಯಕ , ಗವಿಸಿದ್ದಪ್ಪ ಕಲ್ಲನವರ , ಶೇಖಣ್ಣ ಗಿಣಿಗೇರಿ , ಚೆನ್ನಪ್ಪ ವಾಲ್ಮೀಕಿ , ರಾಮಣ್ಣ ಮೇದಾರ , , ನಿಂಗಪ್ಪ ಭೋವಿ , ಬಸವರಾಜ ಭೋವಿ , ಸುಂಕಪ್ಪ ಭೋವಿ , ಸೋಮಶೇಖರ ಮೇದಾರ , ಮಂಜುನಾಥ ಮೇದಾರ ಇನ್ನಿತರ ಮುಖಂಡರು ಭಾಗವಹಿಸಿದ್ದರು .