ಕೊಪ್ಪಳ ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ನಡೆದ ಧರಣಿ ಸ್ಥಗಿತ, ನಾಳೆ ಜಿಲ್ಲಾಡಳಿತ ಭವನದಲ್ಲಿ ಸಭೆ.


ದಿ, 14/5/22ರಿಂದ ಕೊಪ್ಪಳದ ಕಲ್ಯಾಣ ನಗರದ ನಿವಾಸಿಗಳು, ಕಲ್ಯಾಣ ನಗರ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ, ಅಲ್ಲಿನ ಜನವಸತಿ ಪ್ರದೇಶದಲ್ಲಿ ಜನರ ವಿರೋಧವನ್ನು ಲೆಕ್ಕಿಸದೆ, ಕೈಗೊಳ್ಳಲಾದ ಟವರ್ ನಿರ್ಮಾಣ ಕಾಮಗಾರಿಯನ್ನು ವಿರೋಧಿಸಿ ನಡೆದ ಧರಣಿ ಸತ್ಯಾಗ್ರಹವನ್ನು ಪೌರಾಯುಕ್ತರು ನೀಡಿದ ಲಿಖಿತ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಈ ಸಮಸ್ಯೆಗೆ ಪರಿಹಾರವಾಗಿ ನಾಳೆ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಯಲಿದೆ.
ನಗರಸಭೆಯಿಂದ ಯಾವುದೇ ರೀತಿಯ ಪರವಾನಿಗೆಯನ್ನು ಕಟ್ಟಲಾದ ಸುರಕ್ಷಿತವಲ್ಲದ ಮನೆಯು ಜನವಸತಿ ಪ್ರದೇಶದಲ್ಲಿ ಇದ್ದು, ಅದರ 3ಅಂತಸ್ತಿನ ಕಟ್ಟಡದ ಮೇಲೆ ಅತ್ಯಂತ ಭಾರವಾದ ಟವರ್ ನಿರ್ಮಾಣ ಕಾಮಗಾರಿಯು ಮುಂದೊಂದು ದಿನ ಅಪಾಯವನ್ನು ತಂದೊಡ್ಡಲಿದೆ.ಮಕ್ಕಳು,ಗರ್ಭಿಣಿ ಮಹಿಳೆಯರು ಸೇರಿದಂತೆ ಜನರ ಆರೋಗ್ಯ ದ ಕೆಟ್ಟ ಪರಿಣಾಮವನ್ನು ಬೀರುವ ಟವರ್ ಗಳನ್ನು
ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಬಾರದು ಎಂಬುದು ಸರ್ಕಾರದ ಆದೇಶವಿದೆ. ಜನವಿರೋಧಿ ಮಧ್ಯೆಯು ಕಂಪನಿಯವರು ಮೊಂಡುತನದಿಂದ ಕಾಮಗಾರಿಯನ್ನು ಮುಂದು ವರಿಸಿದಾಗ ಕಲ್ಯಾಣ ನಗರದ ನಿವಾಸಿಗಳು ಟವರ್ ಕಾಮಗಾರಿ ನಡೆದ ಸ್ಥಳದ ಎದುರುಗಡೆ ಧರಣಿಯನ್ನು ಆರಂಭಿಸಲಾಗಿತ್ತು,.ಈ ವಿಷಯವನ್ನು ಇಂದು ಸಂಸದರ ಗಮನಕ್ಕೂ ,ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಾಗಿತ್ತು. ಜಿಲ್ಲಾಧಿಕಾರಿಗಳು ಸ್ಪಂದಿಸಿ, ಅಧಿಕಾರಿಗಳಿಗೆ ಸೂಕ್ತವಾದ ನಿರ್ಧೇಶನವನ್ನು ನೀಡಿದ ಹಿನ್ನೆಲೆಯಲ್ಲಿ ,ಇಂದು ಸಂಜೆ ಧರಣಿ ಸ್ಥಳಕ್ಕೆ ಆಗಮಿಸಿದ ನಗರಸಭೆಯ ಪೌರಾಯುಕ್ತರು ,ನಾಳೆ ಇದೇ ವಿಚಾರವಾಗಿ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಯಲಿದೆ, ಚಳುವಳಿ ಹಿಂಪಡೆಯುವಂತೆ ವಿನಂತಿಸಿಕೊಂಡ ಕಾರಣ, ನಿನ್ನೆಯಿಂದ ನಡೆಯುತ್ತಿದ್ದ ಧರಣಿಯನ್ನು ಹಿಂಪಡೆಯಲಾಯಿತು .

Please follow and like us: