ಕೊಪ್ಪಳ ಅಬಕಾರಿ ಡಿಸಿ ಎಸಿಬಿ ಬಲೆಗೆ

ಕೊಪ್ಪಳ : Bar &Restaurant ( ಸಿ.ಎಲ್ -7 ) ಪರವಾನಿಗೆ ನೀಡಲು ಹಣ ಪಡೆಯುವಾಗ ಅಬಕಾರಿ ಡಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ನೂತನ ಬಾರ್ ಎಂಡ್ ರೆಸ್ಟೋರೆಂಟ್ ಪರವಾನಿಗೆ ನೀಡಲು ಕುಷ್ಟಗಿಯ ಶೈಲಜಾ ಪ್ರಭಾಕರಗೌಡರಿಂದ ೧ ಲಕ್ಷ ರೂಪಾಯಿ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ದಾಳಿಗೆ ಅಬಕಾರಿ ಡಿಸಿ ಸೆಲಿನಾ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ . ಬಾರ್ ಎಂಡ್ ರೆಸ್ಟೋರೆಂಟ್ ಪರವಾನಿಗೆ ನೀಡಲು ಮಾಲಿಕರಿಂದ ೩ ಲಕ್ಷ ರೂಪಾಯಿ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಈ ಕುರಿತು ಎಸಿಬಿಯಲ್ಲಿ ದೂರು ನೀಡಲಾಗಿತ್ತು. ಇಂದು ಸಂಜೆ ಮುಂಗಡವಾಗಿ ೧ ಲಕ್ಷ ಪಡೆಯುವಾಗ ಅಬಕಾರಿ ಡಿಸಿ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳು ಸೆಲಿನಾ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ದಾಳಿಯ ನೇತೃತ್ವವನ್ನು Dsp ಶಿವಕುಮಾರ್, ಇನ್ಸ್ಪೆಕ್ಟರ್ ಗಳಾದ ಆಂಜನೇಯ, ಶಿವರಾಜ್ ಸೇರಿದಂತೆ ಇತರರು ವಹಿಸಿದ್ದರು

Please follow and like us: