ವಿದ್ಯುತ್ ಅವಘಡ ತಾಯಿ ಮಕ್ಕಳು ಬಲಿ

ಕೊಪ್ಪಳ : ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನಪ್ಪಿದ ಘಟನೆ ನಡೆದಿದೆ. ಬಟ್ಟೆಗಳನ್ನು ಒಣಗಲು ಹಾಕುವ ವೇಳೆ ಅರ್ಥಿಂಗ್ ವಾಯರ್‌ನಿಂದ ವಿದ್ಯುತ್ ಪ್ರವಹಿಸಿದೆ, ಆಟ ವಾಡುತ್ತಿದ್ದ ಮಕ್ಕಳಿಗೆ ಮತ್ತು ತಾಯಿಗೆ  ವಿದ್ಯುತ್ ಶಾಕ್‌ ತಗುಲಿ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ,

ತಾಯಿ ಶೈಲಮ್ಮ ಗಂಡ ಉಮೇಶ್ (28) ಮತ್ತು ಮಕ್ಕಳಾದ ಸಾನ್ವಿ (6) ಹಾಗು ಪವನ್ (4) ದುರ್ದೈವಿಗಳಾಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ, ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Please follow and like us: