ಪಿಎಸ್ಐ ನೇಮಕ ಅಕ್ರಮ : ಎನ್‌. ಎಸ್. ಯು. ಐ. ಪ್ರತಿಭಟನೆ

ಕೊಪ್ಪಳ, ಮೇ. ೪: ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಪಿ ಎಸ್ ಐ ಮತ್ತು ಇತರೆ ನೇಮಕ ಅಕ್ರಮಗಳ ಕೂಲಂಕುಷವಾಗಿ ತನಿಖೆ‌ ಮಾಡಿ ಕೇವಲ ತಪ್ಪು ಮಾಡಿದವರಿಗೆ ಮಾತ್ರ‌ ಶಿಕ್ಷೆ ಕೊಡಬೇಕು ಹೊರತು ಪೂರ್ಣ ಪ್ರಕ್ರಿಯೆ ರದ್ದುಗೊಳಿಸಬಾರದು ಎಂದು ಎನ್. ಎಅ್. ಯು. ಐ ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿಸಿತು. ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ವೇಳೆ ಈ ಕುರಿತು ಮಾತನಾಡಿದ ಮಾಜಿ ಜಿಲ್ಲಾ ಎನ್. ಎಸ್. ಯು. ಐ. ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದು ಸಚಿವ ಶಾಸಕರೇ ಅದರಲ್ಲಿ ಪಾಲುದಾರರಾಗಿದ್ದಾರೆ. ರಾಷ್ಟ್ರಪತಿಗಳು ರಾಜ್ಯಪಾಲರು ಸರಕಾರಗಳ ಮೇಲೆ‌ ಕ್ರಮ ತೆಗೆದುಕೊಳ್ಳುವ ಮೂಲಕ ನ್ಯಾಯಯುತವಾಗಿ ನೌಕರಿ ಪಡೆದ ಜನರಿಗೆ ಅವಕಾಶ ಮಾಡಬೇಕು, ಇನ್ನೂ ಕಳ್ಳದಾರಿ ಹಿಡಿದವರ ಹೆಡೆಮುರಿ ಕಟ್ಟಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎನ್. ಎಸ್. ಯು. ಐ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಮಾದಿನೂರು, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಯೂನಸ್ ನಮಾಜಿ, ಕಾರಟಗಿ ತಾಲೂಕ ಅಧ್ಯಕ್ಷ ಲಿಂಗೇಶ್ ಕಲ್ಗುಡಿ, ಸಲೀಂ ಅಳವಂಡಿ ಇತರರು ಇದ್ದರು.

Please follow and like us: