ಶಿಕ್ಷಕರ ತರಬೇತಿ ಪಡೆದ ಸ್ನೇಹಿತರಿಂದ,ಶಿಕ್ಷಕರಿಂದ ಗುರು ನಮನ, ಸ್ನೇಹ ಸಮ್ಮಿಲನ

ಯಾವುದೇ ಜಾತಿ, ಮತ, ಪಂಗಡವಿಲ್ಲದೆ ಎಲ್ಲವನ್ನು ಮೀರಿ ಸ್ನೇಹ ಬಳಗವೆಲ್ಲ ಒಂದೆಡೆ ಸೇರಿ ಈ ಕಾರ್ಯಕ್ರಮ ನೋಡಿ ನನ್ನ ಜೀವನದಲ್ಲಿ ಖುಷಿಯನ್ನು ನೀಡಿದ ಸುದಿನ -ಶಂಭುಲಿಂಗನಗೌಡ ಪಾಟೀಲ್
1989-90 ರಲ್ಲಿ ಶಿಕ್ಷಕರ ತರಬೇತಿ ಪಡೆದ ಸ್ನೇಹಿತರಿಂದ,ಶಿಕ್ಷಕರಿಂದ ಗುರು ನಮನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಈ ಸುಂದರ, ವಿಶಿಷ್ಟ ವೇದಿಕೆಯ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ  ಶಂಭುಲಿಂಗನಗೌಡ ಪಾಟೀಲ್ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವರು ಸಸಿಗೆ ನೀರೇರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಇಂದು,1989- 90 ನೇ ಸಾಲಿನ ಆಂತರಿಕ ಶಿಕ್ಷಕರ ತರಬೇತಿಯನ್ನು ಪಡೆದ 135 ಜನರಲ್ಲಿ 125 ಕ್ಕೂ ಹೆಚ್ಚು ಜನ ಶಿಕ್ಷಕರಾಗಿ 1992 ರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಇಂದಿಗೆ 30 ವರ್ಷಗಳ ಸುದೀರ್ಘ ಸೇವೆಗೆ, ಈ ಸುಂದರ ಜೀವನಕ್ಕೆ ಕಾರಣೀಭೂತರದ ಶಿಕ್ಷಕ ವೃತ್ತಿ ತರಬೇತಿ ನೀಡಿದ ಗುರುಗಳನ್ನು ಸ್ಮರಿಸಿಕೊಳ್ಳುವಂಥ ಹಾಗೂ ಸ್ನೇಹಿತರೆಲ್ಲ ಒಂದೆಡೆ ಸೇರಿ ನೆನಪಿನ ಬುತ್ತಿಯನ್ನು ಬಿಚ್ಚುವಂತ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ. ಯಾವುದೇ ಜಾತಿ, ಮತ, ಪಂಗಡವಿಲ್ಲದೆ ಎಲ್ಲವನ್ನು ಮೀರಿ ಸ್ನೇಹ ಬಳಗವೆಲ್ಲ ಒಂದೆಡೆ ಸೇರಿ ಈ ಕಾರ್ಯಕ್ರಮ ನೋಡಿ ನನ್ನ ಜೀವನದಲ್ಲಿ ಖುಷಿಯನ್ನು ನೀಡಿದ ಸುದಿನ ಅದರಲ್ಲೂ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದು ನನ್ನ ಪುಣ್ಯ. ವೇದಿಕೆ ಮೇಲಿರುವಂಥ ಎಲ್ಲಾ ಗುರುಗಳು ಕೂಡ ನನ್ನ ಗುರುಗಳು ಆದ್ರೆ ಬ್ಯಾಚ್ ಮಾತ್ರ ಬೇರೆ, ನಾನು ಮುಂದೆ ಕೂಡಬೇಕಾಗಿತ್ತು ಆದ್ರೆ ಅಧ್ಯಕ್ಷನಾಗಿರುವುದಕ್ಕೆ ಮಾತ್ರ ಮೇಲೆ ಕೂತಿದೀನಿ ಅದು ದೈವ ಸಂಕಲ್ಪ. ಗವಿಶ್ರೀ ನೆಲದ ಗರಡಿಯಲ್ಲಿ ಬೆಳೆದ ನೀವುಗಳು ಇನ್ನು ಮುಂದೆ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡಿ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, ನಿಮ್ಮ ಸ್ನೇಹ ಹೀಗೆ ಗಟ್ಟಿಯಾಗಿರಲಿ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ,   ವಿ ಕೆ ಜಾಗಟಗೇರಿ,   ಜೆ ಎಸ್ ಪಾಟೀಲ್,   ಐ ಬಿ ಅಂಗಡಿ,   ಎಮ್ ಬಿ ಕುಕನೂರ,   ವಿ ಎಸ್ ಹಿರೇಮಠ,  ವಿ ಎಸ್ ಕಳ್ಳಿಮಠ   ವೀರೇಶ್ ಹಿಟ್ನಾಳ್,  ಉಮೇಶ ಪೂಜಾರ, ಶ್ರೀಮತಿ ಕಾಶಿಬಾಯಿ ಕೊತಬಾಳ್, ಶ್ರೀಮತಿ ಗಂಗೂ ಶಾಸ್ತ್ರಿ, ಹಾಗೂ
1989-90 ನೇ ಸಾಲಿನ ಶಿಕ್ಷಕರ ಆಂತರಿಕ ತರಬೇತಿಯ ಸ್ನೇಹಾಬಳಗ ಹಾಗೂ ಕುಟುಂಬ ವರ್ಗ ಉಪಸ್ಥಿತರಿದ್ದರು.