ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರ ‘ದೈವೀರಾಜ್ಯ’ ಕವನ ಬಳ್ಳಾರಿ ಯವಿ.ಎಸ್.ಕೆ. ವಿವಿಯ ಪಠ್ಯಕ್ಕೆಅಯ್ಕೆ


ಕೊಪ್ಪಳ ಏ.೨೧:ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ೨೦೨೧-೨೨ನೇ ಸಾಲಿನಿಂದಕನ್ನಡ ಪಠ್ಯಕ್ಕೆ ಕೊಪ್ಪಳ ಜಿಲ್ಲೆಯಮೂರು ಬರಹಗಾರರ ಕವನಗಳು ಆಯ್ಕೆಯಾಗಿವೆ. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪಾನ್ಯಸಕರಾಗಿ ಸೇವೆಸಲ್ಲಿಸುತ್ತಿರು ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರ ‘ದೈವೀರಾಜ್ಯ’ ಎಂಬ ಕವನವು ಬಿ.ಕಾಂ, ಬಿ.ಬಿ.ಎಂ, ಬಿ.ಬಿ.ಎ, ಹಾಗೂ ಐ.ಎಂ.ಬಿ ದ್ವಿತೀಯ ಸೆಮಿಸ್ಟರ್‌ಕನ್ನಡ ಬೇಸಿಕ್ ಪಠ್ಯಕ್ಕೆ ಆಯ್ಕೆಯಾಗಿದೆ. ಯುವಕವಿ ಮತ್ತು ಶಿಕ್ಷಕರಾದ ಮಹೇಶ ಬಳ್ಳಾರಿಯವರ ‘ಹೋಟೆಲ್‌ದೊಳಗಿನ ಟೇಬಲ್’ ಎಂಬ ಕವನವು ಬಿ.ಎ, ಬಿ.ಎಸ್.ಡಬ್ಲೂ ದ್ವಿತೀಯ ಸೆಮಿಸ್ಟರ್ ಪಠ್ಯಕೆ ಆಯ್ಕೆಯಾಗಿದೆ ಹಾಗೂ ಕನಕಗಿರಿಯಉಪನ್ಯಾಸಕ ಇಮಾಮ್‌ಸಾಹೇಬ್ ಹಡಗಲಿಯವರ ‘ನಾಲ್ಕು ಗೋಡೆಗಳ ಮಧ್ಯ’ ಎಂಬ ಕವನವು ಬಿ.ಎಸ್ಸಿ, ಬಿ.ಸಿ.ಎ., ಜಿ.ಎಂ.ಟಿ ದ್ವಿತೀಯ ಸೆಮಿಸ್ಟರ್ ಪಠ್ಯಕ್ಕೆಆಯ್ಕೆಯಾಗಿದೆ.
ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಕೊಪ್ಪಳ ಜಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿP ಇತಿಹಾಸ, ಸಂಸಾರ ಸಗ್ಗ, ಮಾನ್ವಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ, ಮಾನ್ವಿಯ ಮಹನೀಯರು, ಕೊಪ್ಪಳ ತಾಲೂಕು ಗ್ಯಾಸೇಟಿಯರ್ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.ಮಹೇಶ ಬಳ್ಳಾರಿಯವರು ಸ್ಪೂರ್ತಿಯ ಸೆಲೆ, ಕಲ್ಲು ಲಿಂಗವಾದ ದಿನ, ಕಗ್ಗತ್ತಲು, ಮರ್ಮ, ಎಡವಿಬಿದ್ದದೇವರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇಮಾಮ್ ಸಾಹೇಬ್ ಹಡಗಲಿಯವರು ಮಿರ್ಜಾಗಾಲಿಬ್, ಅರಿಗೋಲು ಅಂಬಿಗ, ಕನಕಗಿರಿಜಾತ್ರೆ ಬಲು ಜೋರು, ಗಂಗಾಪುತ್ರ ಅಂಬಿಗರ ಚೌಡಯ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.ಈ ಮೂರು ಕವಿಗಳ ಕವನಗಳು ವಿಶ್ವವಿದ್ಯಾಲಯದ ಪಠ್ಯಕ್ಕೆ ಆಯ್ಕೆಯಾಗಿರುವುದಕ್ಕೆ ಸಾಹಿತ್ಯ ಬಳಗ ಅಭಿನಂದಿಸಿದೆ.

koppalpoets kannadapoems

Please follow and like us: