ಮಾನಸಿಕ ಅಸ್ವಸ್ಥನಿಗೆ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಯುವಕರು

ಕೊಪ್ಪಳ – – ಮಾನಸಿಕ ಅಸ್ವಸ್ಥರು ಭಿಕ್ಷುಕರನ್ನು ನೋಡಿದರೆ ಕೀಳಾಗಿ ಕಾಣುವ ಕಾಲವಿದು, ಇಂತಹ ಸಮಯದಲ್ಲಿ ಇಲ್ಲೊಂದು ಯುವಕರ ಪಡೆ ಮಾನಸಿಕ ಅಸ್ವಸ್ಥನ ರೂಪವನ್ನೇ ಬದಲಿಸಿ ಮಾನವೀಯತೆ ಮೆರೆದಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆಯವನು ಆಗಿದ್ದು ಬನ್ನಿಕಟ್ಟಿ ಹತ್ತಿರ ಮೂರ್ನಾಲ್ಕು ವರ್ಷಗಳಿಂದ ಕುಟುಂಬದ ಸಮಸ್ಯೆಯಿಂದ ಹಾಗೂ ತಾಯಿಯ ಸಾವಿನ ನೋವಿನಲ್ಲಿ ಮಾನಸಿಕ ಅಸ್ವಸ್ಥನ ಆಗಿರುವ ಈತನ ಹೆಸರು ವಸಂತ್ ಶಾಸ್ತ್ರಿ ಡಿಗ್ರಿ ಮುಗಿಸಿದ ಈತ ಇಂಗ್ಲಿಷನ್ನು ಸರಳವಾಗಿ ಮಾತನಾಡಬಲ್ಲ. ಬಿಸಿಲಿನಲ್ಲಿ ಗಲೀಜು ಬಟ್ಟೆಯನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರಶಾಂತ್ ಶಾಸ್ತ್ರಿ ಅವರನ್ನು ಗಮನಿಸಿದ ಯುವಕರು ಕೂಡಲೇ ಆತನಿಗೆ ಕಟಿಂಗ್ ಮಾಡಿಸಿ ಸ್ನಾನಮಾಡಿಸಿ ಬಟ್ಟೆ ತೊಡಿಸಿದ್ದಾರೆ.
ಜೊತೆಗೆ ಹಸಿವಿನಿಂದ ಬಳಲುತ್ತಿದ್ದ ಈತನಿಗೆ ತಿಂಡಿ, ನೀರು ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us: