ಧರ್ಮದ ಹೆಸರಲ್ಲಿ ಸೌಹಾರ್ದತೆ ಹಾಳುಗೆಡವುತ್ತಿರೊದು ಸಲ್ಲದು : ಬರಗೂರು ರಾಮಚಂದ್ರಪ್ಪ


ಗಂಗಾವತಿ ಏ.16


ಜಾತಿ ಧರ್ಮದ ಹೆಸರಲ್ಲಿ ಸೌಹಾರ್ದತೆಯನ್ನ ಹಾಳುಗೆಡವುಲಾಗ್ತಿದೆ ಎಂದು ನಾಡೋಜ ಡಾ. ಬರಗೂರು ರಾಮಚಂದ್ರ ಮೇಷ್ಟ್ರು ಕಳವಳವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಅತ್ಯವಶ್ಯಕತೆ ಇದೆ ಎಂದು ಬರಗೂರು ಅಭಿಪ್ರಾಯಪಟ್ಟಿದ್ದಾರೆ‌.
ಗಂಗಾವತಿ ನಗರದಲ್ಲಿ ಜೀವನ ಪ್ರಕಾಶನ ಹಾಗೂ ಬಂಡಾಯ ಸಾಹಿತ್ಯ ಸಂಘಟನೆ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕಿ ಡಾ. ಮುಮ್ತಾಜ್ ಬೇಗಂ ರಚಿಸಿದ ಕೊಂದ ಕನಸುಗಳ ಕೇಸು ಹಾಗೂ ಪತ್ರಕರ್ತ ಸಿದ್ದು ಬಿರಾದಾರ್ ರಚಿಸಿದ ನಿಮಗೊಂದು ಸಲಾಂ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು..
ದೇಶದಲ್ಲಿ ಸೌಹಾರ್ದತೆ ಹಾಳಾಗ್ತಿರುವ ಇಂತಹ ಸಮಯದಲ್ಲಿ ಈ ಇಬ್ಬರು ಲೇಖಕರ ಕೃತಿಗಳು ಸೌಹಾರ್ದತೆಯ ಸಂದೇಶ ಸಾರುತ್ತವೆ ಎಂದು ಬರಗೂರ್ ಮಾರ್ಮಿಕವಾಗಿ ನುಡಿದರು.
ಪ್ರತಿಭಾವಂತರೂ ಬೆಂಗಳೂರಿಗೆ ಸಿಮೀತವಾಗಿಲ್ಲ. ಕರ್ನಾಟದ‌ ಮೂಲೆ ಮೂಲೆಯಲ್ಲೂ ಇದ್ದಾರೆ ಎಂದು ಹೇಳಿದರು. ಗಂಗಾವತಿ ಕೇವಲ ಭತ್ತದ ಕಣಜವಲ್ಲ ಸಾಹಿತ್ಯದ ಕ್ಷೇತ್ರದಲ್ಲಿ ಬತ್ತದ ಕಣ ಎಂದು ಹೇಳಿದರು. ಲೋಕಾರ್ಪಣೆ ಮಾಡಿದ ಎರಡು ಕೃತಿಗಳ ಬಗ್ಗೆಯೂ ಬರಗೂರು ಮೇಷ್ಟ್ರು ಬಿಚ್ಚು ಮನಸ್ಸಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಂದ ಕನಸುಗಳ ಕೇಸು ಪುಸ್ತಕದಲ್ಲಿನ ಕನಸುಗಳನ್ನ ನನಸಾಗಿಸಿಕೊಳ್ಳಲು ಲೇಖಕಿ ಮುಮ್ತಾಜ್ ಬೇಗಂ ಹರ ಸಾಹಸ ಪಡುತ್ತಿದ್ರೆ, ಕನಸುಗಳನ್ನ ನನಸು ಮಾಡಿಕೊಂಡವರ ಸಾಧಕರ ಕುರಿತಾದ ಪುಸ್ತಕ ಬರೆದ ಸಿದ್ದು ಬಿರಾದಾರ್ ಈ ಜೋಡಿ ಕನಸು ನನಸಿನ ಒಳ್ಳೆಯ ಜೋಡಿ ಎಂದು ಬರಗೂರ ಹೇಳಿದರು.
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಲೇಖಕಿ ಡಾ. ಮುಮ್ತಾಜ ಬೇಗಂ ರಚಿಸಿದ ಕೊಂದ ಕನಸುಗಳ ಕೇಸು ಕೃತಿಯ ಬಗ್ಗೆ ಮಾತನಾಡಿದರು. ಪತ್ರಕರ್ತ ಸಿದ್ದು ಬಿರಾದಾರ್ ರಚಿಸಿದ ನಿಮಗೊಂದು ಸಲಾಂ ಪುಸ್ತಕದ ಕುರಿತು ಉಪನ್ಯಾಸಕಿ ಡಾ. ಸೋಮಕ್ಕ ಮಾತನಾಡಿದರು.
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ಡಾ. ಎಸ್.ಬಿ. ಹೊಸಮನಿ, ಶ್ರೀನಿವಾಸ ಅಂಗಡಿ, ಗಂಗಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಬಿ. ಗೊಂಡಬಾಳ್, ಕಾಶಿಂಬಿ ಹುಸೇನ್ ಸಾಬ ಮುಧೋಳ. ಗೌರವಪೂರ್ವಕವಾಗಿ ಕಾರ್ತಕ್ರಮದಲ್ಲಿ ಉಪಸ್ಥಿತರಾಗಿದ್ದರು. ಸಾಹಿತಿ ಗುಂಡೂರ ಪವನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಹೆಚ್. ಮುಧೋಳ. ಮುಜೀಬ್ ರೆಹಮಾನ್ ( ಅಪ್ಯಾ) ಸೇರಿ ಹಲವರು ಇದ್ದರು.

Please follow and like us: