Koppal ಅಪಾಸ್ತಿ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಿಡದಾಳ ಗ್ರಾಮದ ಲಕ್ಷಣ ದೋನಿ ಗೆ ೨೦ ವರ್ಷ ಶಿಕ್ಷೆ ವಿಧಿಸಲಾಗಿದೆ.
ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಸ್ವಂತ ವಿಲೇವಾರಿ ನ್ಯಾಯಾಧೀಶರಾದ ( ಪೋಕ್ಸೊ ) ಶಂಕರ ಎಂ . ಜಾಲವಾದಿ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿಡದಾಳ ಗ್ರಾಮದಲ್ಲಿ ದಿ : 11 ( 09-2020 ರಂದು ಪಿದ್ಯಾಧಿದಾರರು ವಾಸಿಸುವ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಲತ್ಕಾರದ ಸಂಭೋಗ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿದ ಪ್ರಕಾಶ ಮಾಳಿ , ಪಿಐ ಕೊಪ್ಪಳ ಮಹಿಳಾ ಪೋಲಿಸ ಠಾಣೆ ಇವರು ಪ್ರಕರಣದ ತನಿಖೆಯನ್ನು ನಿರ್ವಹಿಸಿದ್ದು ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ಧ ಮೌನೇಶ್ವರ ಮಾಲಿಪಾಟೀಲ , ಪಿಐ ಕೊಪ್ಪಳ ಮಹಿಳಾ ಪೋಲಿಸ ಠಾಣೆ ಇವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು
. ಪ್ರಕರಣದಲ್ಲಿ ಆರೋಪಿ ಲಕ್ಷ್ಮಣ , ಚಂದ್ರಪ್ಪ ದೋನಿ ಸಾ : ಕಿಡದಾಳ ಇತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ . 30,000 ಗಳ ದಂಡವನ್ನು ವಿಧಿಸಿ ದಂಡದ ಮೊತ್ತದಲ್ಲಿ ರೂ .25,000 ಗಳನ್ನು ಭಾದಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ಆದೇಶಿಸಿ ಶಂಕರ ಎಂ . ಜಾಲವಾದಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು [ ಪೋಕ್ಕೊ ) ಕೊಪ್ಪಳ ಇವರು ತೀರ್ಪು ಹೊರಡಿಸಿದ್ದಾರೆ . ಸರ್ಕಾರದ ಪರವಾಗಿ ಶ್ರೀಮತಿ ಗೌರಮ್ಮ ದೇಸಾಯಿ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು .