ಅಪಘಾತಕ್ಕೆ ಸಂಸದರ ಸಹೋದರ ಬಸಣ್ಣ ಕರಡಿ ಸಾವು

ಕೊಪ್ಪಳ : ಕೊಪ್ಪಳದ ಟಣಕಣಕಲ್ ಬಳಿ ನಡೆದ ರಸ್ತೆ ಅಪಾಘಾತದಲ್ಲಿ ಸಂಸದ ಸಂಗಣ್ಣ ಕರಡಿ ಸಹೋದರ ಬಸಣ್ಣ ಅಮರಪ್ಪ ಕರಡಿ ಸಾವನ್ನಪ್ಪಿದ್ದಾರೆ.

ಬಸಣ್ಣ ಕರಡಿ ಕೊಪ್ಪಳದಿಂದ ಟಣಕನಕಲ್ ಮನೆ ಕಡೆ ಸ್ಕೂಟಿ ಮೇಲೆ ತೆರಳುತ್ತಿದ್ದಾಗ ಓಜನಹಳ್ಳಿ ಕ್ರಾಸ್ ಬಳಿ ಏಕಾಏಕಿ ಅತಿವೇಗದಿಂದ ಬಂದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಹತ್ತಾರು ಮೀಟರ್ ವರೆಗೆ ಎಳೆದುಕೊಂಡು ಬಂದಿದೆ. ಬೀಕರ ಅಪಘಾತದಿಂದ ಬಸಣ್ಣ ಕರಡಿ ಗಾಯಗೊಂಡಿದ್ದಾರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.

ಟಣಕನಕಲ್ ಗ್ರಾಮ ಅವರ ನಿವಾಸ ದಲ್ಲಿ ಅಂತಿಮ ದರ್ಶನ ಇದ್ದು ಬಸಣ್ಣ ಕರಡಿಯವರ ಅಂತ್ಯಕ್ರಿಯೆಯನ್ನು ಸಂಜೆ 5 ಗಂಟೆಗೆ ಹನುಮನಹಳ್ಳಿ ಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Please follow and like us: