ಏ. ೨೪ ರಂದು ಬೃಹತ್ ಸಂವಿಧಾನ ಸಂರಕ್ಷಣಾ ಸಮಾವೇಶ


ಕೊಪ್ಪಳ, : ಜಿಲ್ಲೆಯ ಕುಷ್ಟಗಿಯ ತಾವರಗೇರಾ ರಸ್ತೆಯ ಎಂಐ ಕಛೇರಿ ಮುಂಭಾಗದ ಬೃಹತ್ ವೇದಿಯಲ್ಲಿ ಏಪ್ರಿಲ್ ೨೪ ರಂದು ಸಂವಿಧಾನ ಸಂರಕ್ಷಣಾ ವೇದಿಕೆ ಅಡಿಯಲ್ಲಿ ಕೊಪ್ಪಳ ಮತ್ತು ರಾಯಚೂರು ದ್ವಿಜಿಲ್ಲಾಮಟ್ಟದ ಸಂವಿಧಾನ ಸಂರಕ್ಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.


ಈ ಕುರಿತು ನಗರದ ವಾಲ್ಮೀಕಿ ಭವನದಲ್ಲಿ ಕೊಪ್ಪಳದ ಪ್ರಮುಖರ ಸಭೆಯನ್ನು ನಡೆಸಿ ಚರ್ಚಿಸಲಾಯಿತು. ಅಂದಿನ ಸಮಾವೇಶದಲ್ಲಿ ಎರಡು ಜಿಲ್ಲೆಯ ಸುಮಾರು ೨೫ ಸಾವಿರ ಅಂಬೇಡ್ಕರ್ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ರಾಜ್ಯದ ಪ್ರಮುಖ ರಾಜಕೀಯ ನೇತಾರರು ಮತ್ತು ಚಿಂತಕರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಳ್ಳುವರು. ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಹೆಚ್. ಸಿ. ಮಹಾದೇವಪ್ಪ, ಎಂಎಲ್‌ಸಿ ಸಲೀಂ ಅಹ್ಮದ್ ಸೇರಿದಂತೆ ಅನೇಕರು ಪಾಲ್ಗೊಂಡು ವಿಚಾರ ಮಂಡಿಸುವರು.
ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿ ಪ್ರಬಲವಾಗಿದೆ, ಎಲ್ಲಾ ಕ್ಷೇತ್ರದಲ್ಲಿ ಅವರು ಬೇರು ಗಟ್ಟಿಯಾಗಿದ್ದು, ಸುಳ್ಳು ಮೋಸದ ಮಾತಿಗೆ ಮರುಳಾಗದೆ ಸೈನಿಕರಂತೆ ಹೋರಾಡುವ ಕಾಲ ಬಂದಿದೆ, ದೇಶ ಈಗ ಆಂತರಿಕ ಯುದ್ಧದ ಭೀತಿಯಲ್ಲಿದ್ದು ಎಚ್ಚರಗೊಳ್ಳುವ ಕಾರ್ಯ ಆಗಬೇಕಿದೆ. ದೇಶದಲ್ಲಿ ಅಂಬೇಡ್ಕರ್ ಚಿಂತನೆ ಮತ್ತು ಸಂವಿಧಾನಕ್ಕೆ ದೊಡ್ಡಮಟ್ಟದ ಆತಂಕ ಎದುರಾಗಿದೆ, ಮುಸ್ಲಿಂರನ್ನು ಈಗ ಟಾರ್ಗೆಟ್ ಮಾಡಲಾಗಿದ್ದು ನಂತರ ದಲಿತರ ಸರದಿ ಇದೆ, ಒಂದೇ ಬಾರಿಗೆ ವಿರೋಧಿಸಿದರೆ ಬಿಜೆಪಿ ವಿರುದ್ಧ ಅಹಿಂದ ಸಮುದಾಯ ಒಂದಾಗುವ ಆತಂಕದಿAದ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ, ಪ್ರಸ್ತುತ ಎಲ್ಲಾ ಪ್ರತಿಭಟನೆ ಹೋರಾಟದಲ್ಲಿ ಅಹಿಂದ ಹುಡುಗರೇ ಇದ್ದಾರೆ ಹೊರತು ಅಲ್ಲಿ ಯಾವ ಜನಪ್ರತಿನಿಧಿಯ ಮಕ್ಕಳು, ಮುಂದುವರಿದ ಸಮುದಾಯದವರ ಮಕ್ಕಳು ಇರುವದಿಲ್ಲ ಎಂಬ ಅರಿವು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶ ಸಮಾವೇಶದ್ದು, ಇದು ಆರಂಭದ ಪೀಠಿಕೆಯಾಗಿದ್ದು ಇಂತಹ ಮಾದರಿಯ ಸಮಾವೇಶಗಳನ್ನು ಉತ್ತರ ಕರ್ನಾಟಕದ ಐದು ಕಡೆಗೆ ಮಾಡಿ ಜನಜಾಗೃತಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮಾಜಿ ತಾ. ಪಂ. ಅಧ್ಯಕ್ಷ ದಾನಪ್ಪ ಕವಲೂರ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಎಂ. ಇಟ್ಟಂಗಿ, ಮಾಜಿ ಗ್ರಾ. ಪಂ. ಅಧ್ಯಕ್ಷ ಯಮನೂರಪ್ಪ ನಾಯಕ್, ವಾಲ್ಮೀಕಿ ಸಮಾಜದ ಯುವ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಅಲ್ಪಸಂಖ್ಯಾತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಲೀಂ ಅಳವಂಡಿ, ಮಾಜಿ ನಗರಸಭೆ ಸದಸ್ಯರಾದ ಕಾಟನ್ ಪಾಶಾ, ಮಾನವಿ ಪಾಶಾ, ರಾಮಣ್ಣ ಹದ್ದಿನ್, ವಾಲ್ಮೀಕಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ, ಪತ್ರಕರ್ತ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಹೆಚ್. ವಿ., ಮುಖಂಡರುಗಳಾದ ಹನುಮೇಶ ಕಡೆಮನಿ, ಜಹೀರ ಅಲಿ, ಭಾಷುಸಾಬ ಖತೀಬ್, ಮಲ್ಲಿಕಾರ್ಜುನ ಪೂಜಾರ, ರಿಯಾಜ ಮಂಗಳೂರು, ಶೇಖರಪ್ಪ ಇಂದರಗಿ, ಈರಣ್ಣ ಹುಣಸಿಮರದ, ದ್ಯಾಮಣ್ಣ ಪೂಜಾರ, ವಿರುಪಾಕ್ಷಪ್ಪ ಕಟ್ಟಿಮನಿ, ವಿನೋದ ಪೂಜಾರ, ರಂಗಪ್ಪ ವಾಲ್ಮೀಕಿ, ಕಾಶಪ್ಪ ಚಲುವಾದಿ, ನೀಲಪ್ಪ ಹೊಸಮನಿ, ಚನ್ನಪ್ಪ ಹಂಚಿನಾಳ, ದೇವಪ್ಪ ಹ್ಯಾಟಿ, ರವಿ ಕುರಗೋಡ ಯಾದವ, ಹುಸೇನಪೀರಾ ಮುಜಾವರ, ರಾಘವೇಂದ್ರ ಡಿ, ಆನಂದ ಬೆಲ್ಲದ ಇತರರು ಇದ್ದರು.

Please follow and like us: